ಎಂಐ-17 ಯುದ್ಧ ಹೆಲಿಕಾಪ್ಟರ್ ಯಶಸ್ವಿ ಹಾರಾಟ ನಡೆಸಿದ ಭಾರತದ ಮಹಿಳಾ ಯೋಧರು

ನವದೆಹಲಿ:ಮೇ-28:(www.justkannada.in) ಎಂಐ-17 ಯುದ್ಧ ಹೆಲಿಕಾಪ್ಟರ್​ನಲ್ಲಿ ಯಶಸ್ವಿಯಾಗಿ ಹಾರಾಟ ನಡೆಸುವ ಮೂಲಕ ಭಾರತೀಯ ವಾಯುಪಡೆಯ ಮಹಿಳಾ ಯೋಧರು ಹೊಸ ಇತಿಹಾಸ ಸೃಷ್ತಿಸಿದ್ದಾರೆ.

ಯುದ್ಧಸನ್ನದ್ಧತೆಯ ತರಬೇತಿ ಕಾರ್ಯಕ್ರಮದಡಿಯಲ್ಲಿ ನೈಋತ್ಯ ವಾಯು ನೆಲೆಯ ನಿರ್ಬಂಧಿತ ಪ್ರದೇಶಗಳಲ್ಲಿ ಹೆಲಿಕಾಪ್ಟರ್​ ಅನ್ನು ಇಳಿಸುವುದು ಮತ್ತು ಹಾರಾಟ ಕೈಗೊಳ್ಳುವುದು ಸೇರಿದಂತೆ ಹಲವು ರೀತಿಯ ತರಬೇತಿ ವೇಳೆ ಈ ಮಹಿಳಾ ಯೋಧರು ಯಶಸ್ವಿ ಹಾರಾಟ ಕೈಗೊಂಡರು ಎಂದು ಭಾರತೀಯ ವಾಯುಪಡೆ ಮಾಹಿತಿ ನೀಡಿದೆ.

ಕ್ಯಾಪ್ಟನ್ ಫ್ಲೈಟ್​ ಲೆಫ್ಟಿನೆಂಟ್​ ಪಾರುಲ್​ ಭಾರಧ್ವಜ ನೇತೃತ್ವದಲ್ಲಿ ಫ್ಲೈಯಿಂಗ್​ ಆಫೀಸರ್​ ಅಮನ್​ ನಿಧಿ (ಸಹಪೈಲಟ್​) ಮತ್ತು ಫ್ಲೈಟ್​ ಲೆಫ್ಟಿನೆಂಟ್​ ಹಿನಾ ಜೈಸ್ವಾಲ್​ (ಫ್ಲೈಟ್​ ಇಂಜಿನಿಯರ್​) ಎಂಐ-17 ವಿ5 ಯುದ್ಧಹೆಲಿಕಾಪ್ಟರ್​ನಲ್ಲಿ ಹಾರಾಟ ನಡೆಸಿದ್ದಾರೆ.

ಈ ಮೂಲಕ ಪಂಜಾಬ್​ನ ಮುಕೇರಿಯನ್​ ನಿವಾಸಿಯಾಗಿರುವ ಫ್ಲೈಟ್​ ಲೆಫ್ಟಿನೆಂಟ್​ ಪಾರುಲ್​ ಭಾರಧ್ವಜ್​, ಎಂಐ-17 ವಿ5 ಯುದ್ಧಹೆಲಿಕಾಪ್ಟರ್ ಅನ್ನು ಚಾಲನೆ ಮಾಡಿದ ಮೊದಲ ಮಹಿಳಾ ಪೈಲಟ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರೆ, ರಾಂಚಿ ನಿವಾಸಿ ಫ್ಲೈಯಿಂಗ್​ ಆಫೀಸರ್​ ನಿಧಿ ಜಾರ್ಖಂಡ್​ನ ಮೊದಲ ಐಎಎಫ್​ ಪೈಲಟ್​ ಎಂಬ ಹೆಗ್ಗಳಿಕೆಗೆ ಹಾಗೂ ಚಂಡಿಗಢ ನಿವಾಸಿ ಫ್ಲೈಯಿಂಗ್​ ಆಫೀಸರ್​ ಜೈಸ್ವಾಲ್​ ಭಾರತೀಯ ವಾಯುಪಡೆಯ ಮೊದಲ ಮಹಿಳಾ ಫ್ಲೈಟ್​ ಇಂಜಿನಿಯರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಎಂಐ-17 ಯುದ್ಧ ಹೆಲಿಕಾಪ್ಟರ್ ಯಶಸ್ವಿ ಹಾರಾಟ ನಡೆಸಿದ ಭಾರತದ ಮಹಿಳಾ ಯೋಧರು

IAF all-women crew flies Mi-17 chopper for first time

In yet another achievement by women officers, an all-woman ccrew on Monday flew a medium-lift helicopter for the first time in India, the Indian Air Force (IAF) said.