Saturday, August 8, 2026

BDA Apartments

Home Front Page ನನ್ನ ಉಸಿರಿರುವವರೆಗೂ ವಾಲ್ಮಿಕಿ ಸಮಾಜಕ್ಕೆ ದುಡಿಯುತ್ತೇನೆ-ಸಿಎಂ ಬಸವರಾಜ ಬೊಮ್ಮಾಯಿ.

ನನ್ನ ಉಸಿರಿರುವವರೆಗೂ ವಾಲ್ಮಿಕಿ ಸಮಾಜಕ್ಕೆ ದುಡಿಯುತ್ತೇನೆ-ಸಿಎಂ ಬಸವರಾಜ ಬೊಮ್ಮಾಯಿ.

ದಾವಣಗೆರೆ,ಫೆಬ್ರವರಿ,9,2023(www.justkannada.in): ಎಸ್.ಸಿ ಮತ್ತು ಎಸ್ ಟಿ ಸಮುದಾಯಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿದ್ದೇವೆ. ನನ್ನ ಉಸಿರಿರುವವರೆಗೂ ವಾಲ್ಮಿಕಿ ಸಮಾಜಕ್ಕೆ ದುಡಿಯುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ನುಡಿದರು.

ದಾವಣಗೆರೆ ಹರಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿ ನಡೆದ ವಾಲ್ಮಿಕಿ ಜಾತ್ರೆಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ವಾಲ್ಮೀಕಿ ಸಮಾಜವನ್ನ ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ವಿಜಯನಗರ ಸಾಮಾಜ್ಯ ರಕ್ಷಣೆ ಮಾಡಿದ್ದುವಾಲ್ಮಿಕಿ ಸಮಾಜ. ಎಸ್.ಸಿ ಮತ್ತು ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಜಾರಿಗೆ ಬರಲಿದೆ ಎಂದರು.

ಎಸ್. ಸಿ ಮತ್ತು ಎಸ್ ಟಿ ಸಮುದಾಯಕ್ಕೆ 75 ಯೂನಿಟ್ ಉಚಿತ ವಿದ್ಯುತ್ ಕೊಡುತ್ತೇವೆ. ಪರಿಶಿಷ್ಟ ಪಂಗಡದವರ ಮೇಲೆ ಪ್ರಧಾನಿ ಮೋದಿಗೆ ಅಪಾರ ಗೌರವವಿದೆ ಬುಡಕಟ್ಟುಸಮುದಾಯದ  ಮಹಿಳೆಗೆ ರಾಷ್ಟ್ರಪತಿ ಹುದ್ದೆ ನೀಡಿದ್ದಾರೆ. ನಮ್ಮ ನಾಯಕ ಮೋದಿಯಿಂದ ನಾನು ಸಿಎಂ ಆಗಿದ್ದು ಎಂದು ಸಿಎಂ ಬೊಮ್ಮಾಯಿ ಹೇಳಿದರು.

Key words: I will -work – Valmiki Samaj- until -my breath-CM-Basavaraja Bommai.