ಡಿ.6ರ ಬಳಿಕ ನನ್ನ ಮನಸ್ಸಿನ ಭಾವನೆ ತಿಳಿಸುತ್ತೇನೆ- ಮಾಜಿ ಸಚಿವ ವಿ.ಸೋಮಣ್ಣ.

ಬೆಂಗಳೂರು,ನವೆಂಬರ್,23,2023(www.justkannada.in): ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ನೇಮಕವಾದ ಬೆನ್ನಲ್ಲೆ ಪಕ್ಷದ ವಿರುದ್ದ ಪರೋಕ್ಷವಾಗಿ ಅಸಮಾಧಾನಗೊಂಡಿರುವ ಮಾಜಿ ಸಚಿವ ವಿ.ಸೋಮಣ್ಣ,  ಡಿಸೆಂಬರ್ 6 ಬಳಿಕ ನನ್ನ ಭಾವನೆ ತಿಳಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ವಿ.ಸೋಮಣ್ಣ,   ಅರವಿಂದ ಲಿಂಬಾವಳಿ ಹೇಳಿಕೆಕಗೆ ಸಮ್ಮತಿ ಇದೆ . ಬಿಜೆಪಿ ಪಕ್ಷದಲ್ಲಿ  ಒಂದು ರೀತಿ ಸೋಮನಹಳ್ಳಿ ಮುದುಕಿ ಕಥೆಯಂತಾಗಿದೆ.  ಡಿಸೆಂಬರ್ 6ರ ಬಳಿಕ ಎಲ್ಲವನೂ ‘ಹೇಳುತ್ತೇನೆ.  ಯಾವ ರೀತಿ ನನಗೆ ಹೊಡೆತ ಆಗಿದೆ ಎಂಬುದನ್ನ ಹೇಳುತ್ತೇನೆ ಎಂದರು.

ರಾಜಕಾರಣ ಕ ಮನತನಕ್ಕೆ ಸೀಮಿತವಲ್ಲ.ನಾಟಕವು ಅಲ್ಲ .  ಒಳ ಒಪ್ಪಂದಕ್ಕೆ ಸೀಮಿತವಲ್ಲ. ನನ್ನನ್ನನ ಯಾರು ಸಂಪರ್ಕಿಸಿಲ್ಲ ನಾನು ಯಾರನ್ನೂ ಸಂಪರ್ಕಿಸಿಲ್ಲ ಎಂದು ವಿ.ಸೋಮಣ್ಣ ತಿಳಿಸಿದರು.

Key words: I will- tell – my feelings- after -December 6-Former minister- V. Somanna.