ಜನರ ನಿರೀಕ್ಷೆಗೂ ಮೀರಿ ಕೆಲಸ ಮಾಡಿದ್ದೇನೆ: ತುಮಕೂರು ಸಂಸದ ಮುದ್ದಹನುಮೇಗೌಡ

ತುಮಕೂರು, ಮೇ 21, 2019 (www.justkannada.in): ಜಿಲ್ಲೆಯ ಜನರ ನಿರೀಕ್ಷೆಗೂ ಮೀರಿ ಕೆಲಸ ಮಾಡಿದ ಹೆಮ್ಮೆ ನನಗೆ ಇದೆ ಎಂದು ಸಂಸದರಾದ  ಮುದ್ದಹನುಮೇಗೌಡ ಹೇಳಿದ್ದಾರೆ.

ಖಾಸಗಿ ಹೋಟೆಲ್ ಸುದ್ದಿಷ್ಠಿಯಲ್ಲಿ ಮಾತನಾಡಿದ ಅವರು ನಾನು ಕಳೆದ ವರ್ಷದ ಅವಧಿಯಲ್ಲಿ ಎಲ್ಲಾ ಜನ ಪ್ರತಿನಿಧಿಗಳು ವಿಶ್ವಾಸ ಕ್ಕೆ ತೆಗೆದುಕೊಂಡು ಅಭಿವೃದ್ಧಿಗೆ ಶ್ರಮಿಸಿದೆ, ಅಧಿಕಾರಿಗಳು, ಸೇರಿದಂತೆ ಜನರು ನಮ್ಮ ಮೇಲೆ ಅಪಾರವಾದ ವಿಶ್ವಾಸ ಇಟ್ಟಿದ್ದರು.ಇದು ನನ್ನ ಜನ್ಮ ಸಾರ್ಥಕ ವಾಯಿತು ಎಂದು ಹೇಳಿದರು.

ನಾನು ಮುಂದೇಯು ಇದೇ ರೀತಿ ಜನರ ಜೂತೆ ಬದುಕು ಸಾಗಿಸುತ್ತೇನೆ. ರಾಜ್ಯ ಸರ್ಕಾರ ಸೇರಿದಂತೆ ಹಲವಾರು ಸಚಿವರು ಸೇರಿದಂತೆ ಎಲ್ಲಾರೂ ಸಹಕಾರ ನೀಡಿದ್ದಾರೆ.
ನಾನು ನೀರೀಕ್ಷೆ ಮಾಡದಂತಹ ಬೆಳವಣಿಗೆ ನಡೆಯಿತ್ತು, ನಮ್ಮ ಪಕ್ಷ ನಮ್ಮ ನನ್ನು ಅತ್ಯಂತ ಗೌರವಯುತವಾಗಿ ನೆಡೆಸಿ ಕೂಡಿಕೊಂಡು ಇದೆ. ಹೊಸ ಇನ್ನಿಂಗ್ಸ್ ಜೂತೆ ಹೂಸ ದಿನಗಳೊಂದಿಗೆ ನಾನು ಜನರೊಂದಿಗೆ ಸಕ್ರೀಯವಾಗಿ ಇರುತ್ತೇನೆ.ಎಂದು ಅವರು ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲೀಕರಣ, ವಿವಿಧ ಯೋಜನೆಗಳ ರೈಲ್ವೆ ಕಾಮಗಾರಿಗಳು ಆರಂಭ ವಾಗಿವೆ, ಸ್ಮಾರ್ಟ್ ಸಿಟಿ ಯೋಜನೆ,ಪಾಸ್ ಪೋರ್ಟ್ ಕಛೇರಿ ಅರಂಬ ಸೇರಿದಂತೆ ಹಲವು ಯೋಜನೆಗಳನ್ನು ಜಿಲ್ಲೆಗೆ ತಂದಿದ್ದೇನೆ.ಗ್ರಾಮ ಪಂಚಾಯತ್ ಮಟ್ಟದಲ್ಲಿ ಜನ ಸಂಪರ್ಕ ಸಭೆ ನಡೆಸಲಾಯಿತು. ನನ್ನ ಅವಧಿಯಲ್ಲಿ ಇಸ್ರೊ, ಹೆಚ್ ಎ ಎಲ್ ಘಟಕಗಳು ಆರಂಭ ವಾಗಿದ್ದು ಮಹತ್ವ ಪಡೆದಿದೆ ಇಂತಹ ಯೋಜನೆಗಳನ್ನು ಜಿಲ್ಲೆಗೆ ತಂದೆ ಈ ಹೆಮ್ಮೆ ನನಗೆ ಇದೆ ಇಂದು ರಾಜ್ಯದ ಜಿಲ್ಲೆಯ ಜನರಿಗೆ ತಿಳಿದಿದೆ ಎಂದರು.

ಐದು ವರ್ಷಗಳ ಅವಧಿಯಲ್ಲಿ ಉತ್ತಮ ವಾಗಿ ಕೆಲಸ ಮಾಡಿದ್ದೇನೆ ಎಂಬ ವಿಶ್ವಾಸ ಇದೆ
ಸಮೀಕ್ಷೆ ಗಳ ಪ್ರಕಾರ ಮತ್ತೆ ಎನ್ ಡಿ ಎ ಬರುತ್ತದೆ. ಪ್ರಧಾನ ಮಂತ್ರಿ ಗಳಾಗಲಿ ನರೇಂದ್ರ ಮೋದಿ ಅವರು ಪ್ರಧಾನಿ ಆಗುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಅದರ ಬಗ್ಗೆ ಎನು ಹೇಳಲಾರೆ ಎಂದರು.