Saturday, September 19, 2026

BDA Apartments

ಹೈಕಮಾಂಡ್ ಬಯಸಿದ್ರೆ ನಾನೂ ಸಿಎಂ ಆಗಲು ರೆಡಿ- ಸಚಿವ ಶರಣಬಸಪ್ಪ ದರ್ಶನಾಪುರ BDA JK_A...
Home Front Page ಹೈಕಮಾಂಡ್ ಬಯಸಿದ್ರೆ ನಾನೂ ಸಿಎಂ ಆಗಲು ರೆಡಿ- ಸಚಿವ ಶರಣಬಸಪ್ಪ ದರ್ಶನಾಪುರ

ಹೈಕಮಾಂಡ್ ಬಯಸಿದ್ರೆ ನಾನೂ ಸಿಎಂ ಆಗಲು ರೆಡಿ- ಸಚಿವ ಶರಣಬಸಪ್ಪ ದರ್ಶನಾಪುರ

ಯಾದಗಿರಿ,ಸೆಪ್ಟಂಬರ್,9,2024 (www.justkannada.in): ಮುಡಾ ಹಗರಣದಲ್ಲಿ ಇತ್ತ ಸಿಎಂ ಸಿದ್ದರಾಮಯ್ಯ ಸಿಲುಕಿದರೇ ಅತ್ತ  ಮುಂದಿನ ಸಿಎಂ ಬಗ್ಗೆ ಚರ್ಚೆಯಾಗುತ್ತಿದೆ . ಈ ಮಧ್ಯೆ ಹೈಕಮಾಂಡ್ ಬಯಸಿದ್ರೆ ನಾನೂ ಸಿಎಂ ಆಗಲು ರೆಡಿ ಎಂದು ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿಕೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಶರಣಬಸಪ್ಪ ದರ್ಶನಾಪುರ, ಹೈಕಮಾಂಡ್  ಹೇಳಿದರೇ ನಾನು ಸಿಎಂ ಆಗುತ್ತೇನೆ.  ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗು ಅಂದರೆ ಸಿಎಂ ಆಗುವೆ  ಮನುಷ್ಯ ಅಂದಮೇಲೆ ಎಲ್ಲರಿಗೂ ಆಸೆಗಳು ಇರುತ್ತದೆ. ಆಸೆ ಇಲ್ಲದೆ ಇರೋರು ಮನುಷ್ಯನೇ ಅಲ್ಲ. ಆದರೆ ಸದ್ಯಕ್ಕೆ ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ ಎಂದರು.

ಕಾಂಗ್ರೆಸ್ 135 ಶಾಸಕರಿಗೂ ಸಿಎಂ ಆಗುವ ಯೋಗ್ಯತೆ ಇದೆ. 135 ಶಾಸಕರಿಗೂ ಮಂತ್ರಿಯಾಗುವ  ಯೋಗ್ಯತೆ ಇದೆ.  ಆದರೆ 33 ಶಾಸಕರಿಗೆ ಮಾತ್ರ ಸಚಿವರನ್ನಾಗಿ ಮಾಡಲಾಯಿತು 150 ಶಾಸಕರಿದ್ದರೂ ಒಬ್ಬರೇ ಸಿಎಂ ಆಗೋದು ಎಂದರು.

Key words: I am, ready , become, CM,  Minister, Sharanbasappa Darshanapura