ನಾನು ನಿಂತ ನೀರಲ್ಲ, ಹರಿಯುವ ನೀರು- ಸಚಿವ ವಿ.ಸೋಮಣ್ಣ.

ಬೆಂಗಳೂರು,ಮಾರ್ಚ್,10,2023(www.justknnada.in): ಸಚಿವ ವಿ.ಸೋಮಣ್ಣ ಕಾಂಗ್ರೆಸ್ ಸೇರ್ಪಡೆ ಬಗ್ಗೆ ವದಂತಿಗಳು ಹಬ್ಬಿದ್ದು  ಈ ಮಧ್ಯ ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಮತ್ತು ಚುನಾವಣಾ ನಿರ್ವಹಣಾ ಸಮಿತಿಯಿಂದ ಸೋಮಣ್ಣಗೆ ಕೋಕ್​​ ನೀಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ವಿ. ಸೋಮಣ್ಣ, ನಾನು ನಿಂತ ನೀರಲ್ಲ, ಹರಿಯುವ ನೀರು ಎಂದು ಹೇಳಿದ್ದಾರೆ.

ಬೆಂಗಳೂರಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸೋಮಣ್ಣ,  ಕ್ಷೇತ್ರದ ಜನರು ನನ್ನನ್ನು ಮನೆ ಮಗನಾಗಿ ನೋಡಿಕೊಂಡಿದ್ದಾರೆ. ನಾನು ಯಾರ ಬಗ್ಗೆಯೂ ಮಾತನಾಡಿಲ್ಲ. ರಾಜ್ಯಾಧ್ಯಕ್ಷರು, ಸಿಎಂ ಜತೆ ಕೆಲವು ವಿಷಯಗಳ ಬಗ್ಗೆ ಚರ್ಚಿಸಿದ್ದೇನೆ. ನನಗೆ ಈಗ 72 ವರ್ಷ, ಆಗಬೇಕಿರುವುದು ಏನೂ ಇಲ್ಲ. ಆದರೆ ಸೋಮಣ್ಣ ನಿಂತ ನೀರಲ್ಲ, ಹರಿಯುವ ನೀರು ಎಂದರು.

ನಾನು ಯಾರ ಬಗ್ಗೆಯೂ ಒಂದು ಸಣ್ಣ ಅಪಚಾರವೂ ಮಾಡಿಲ್ಲ. ರಾಜ್ಯಾಧ್ಯಕ್ಷರು, ಸಿಎಂ ನನಗೆ ಏನು ಹೇಳಿದ್ದಾರೆ ಅಂತ ನನಗೆ ಮಾತ್ರ ಗೊತ್ತಿದೆ. ಆದರೆ ಅವರ ಭಾವನೆಗಳನ್ನು ನಾನು ಅರ್ಥ ಮಾಡಿಕೊಂಡು, ನನ್ನ ಹೊಟ್ಟೆಪಾಡಿಗೋಸ್ಕರ ಏನು ಮಾಡಬೇಕು, ಅದನ್ನು ಮಾಡಿಕೊಂಡು ಹೋಗುತ್ತಿದ್ದೇನೆ. ಕ್ಷೇತ್ರದ ಜನರ ಋಣ ತೀರಿಸಲು ಎಲ್ಲಿವರೆಗು ಇರಬೇಕೋ ಅಲ್ಲಿವರೆಗೆ ಈ ಸೋಮಣ್ಣ ಇರುತ್ತಾ‌ನೆ  ಎಂದು ಸಚಿವ ವಿ.ಸೋಮಣ್ಣ ನುಡಿದರು.

Key words: I am not- stagnant- water- flowing- water – Minister -V. Somanna.