ನನ್ನ ಹೆಸರು ಸಾವರ್ಕರ್ ಅಲ್ಲ, ರಾಹುಲ್ ಗಾಂಧಿ: ಸತ್ಯ ಹೇಳಲು ನಾನು ಹೆದರಲ್ಲ…

ನವದೆಹಲಿ,ಡಿ,14,2019(www.justkannada.in): ಮೇಕ್ ಇನ್ ಇಂಡಿಯಾ ಅಲ್ಲ, ರೇಪ್ ಇನ್ ಇಂಡಿಯಾ ಹೇಳಿಕೆ  ಬಗ್ಗೆ ಕ್ಷಮೆಯಾಚಿಸುವಂತೆ ಬಿಜೆಪಿ ಆಗ್ರಹಿಸಿರುವ ಹಿನ್ನೆಲೆ, ನನ್ನ ಹೆಸರು ಸಾವರ್ಕರ್ ಅಲ್ಲ. ರಾಹುಲ್ ಗಾಂಧಿ, ಸತ್ಯ ಹೇಳಲು ನಾನು ಹೆದರಲ್ಲ. ನಾನು ಕ್ಷಮೆಯಾಚಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂದಿ ಹೇಳಿದರು.

ನವದೆಹಲಿಯಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಭಾರತ್ ಬಚಾವೊ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸತ್ಯವನ್ನು ಹೇಳಿದ್ದಕ್ಕಾಗಿ ನಾನು ಕ್ಷಮೆ ಕೇಳಬೇಕೆಂದು ಬಿಜೆಪಿ ಹೇಳುತ್ತದೆ. ಆದರೆ ಕ್ಷಮೆ ಯಾಚಿಸಲು ನಾನು ರಾಹುಲ್, ಸಾವರ್ಕರ್ ಅಲ್ಲ, ರಾಹುಲ್ ಗಾಂಧಿ. ಸತ್ಯ ಹೇಳಲು ನಾನು ಹೆದರುವುದಿಲ್ಲ ಎಂದು ತಿಳಿಸಿದರು.

ನರೇಂದ್ರ ಮೋದಿ ಮತ್ತು ಅಮಿತ್ ಶಾ ದೇಶದ ಆರ್ಥಿಕತೆಯನ್ನು ನಾಶಪಡಿಸಿದ್ದಾರೆ .ಅದಕ್ಕಾಗಿ ಅವರು ದೇಶದ ಕ್ಷಮೆ ಯಾಚಿಸಬೇಕು. ನಮ್ಮ ಆರ್ಥಿಕ ವ್ಯವಸ್ಥೆಯನ್ನು ನೋಟು ನಿಷೇಧವು ನಾಶಗೊಳಿಸಿದೆ. ಇಂದು ಜಿಡಿಪಿ 4 ಶೇ.ಕ್ಕೆ ತಲುಪಿದೆ. ಅದೂ ಕೂಡ ಜಿಡಿಪಿ ಅಳೆಯುವ ವಿಧಾನವನ್ನು ಬಿಜೆಪಿ ಬದಲಿಸಿದ ಬಳಿಕ. ಒಂದು ವೇಳೆ ಹಿಂದಿನ ರೀತಿಯಲ್ಲಿ ಜಿಡಿಪಿಯನ್ನು ಲೆಕ್ಕ ಹಾಕುವುದಾದರೆ ಜಿಡಿಪಿ 2.5 ಶೇ.ದಷ್ಟಿರಬಹುದು ಎಂದು ಕಿಡಿಕಾರಿದರು.

Key words: I am not -Savarkar –apologize-congress leader- Rahul Gandhi-not afraid