Tuesday, August 4, 2026

BDA Apartments

Home Front Page ಮಂತ್ರಿಗಿರಿ ಸಿಗಲಿಲ್ಲ ಅಂತಾ ಓಡಿ ಹೋಗುವವನು ನಾನಲ್ಲ: ಮುಂದಿನ ಎಲೆಕ್ಷನ್ ಗೆ ಟಿಕೆಟ್ ಸಿಗದಿದ್ರೂ ವಿಚಲಿತನಾಗಲ್ಲ-...

ಮಂತ್ರಿಗಿರಿ ಸಿಗಲಿಲ್ಲ ಅಂತಾ ಓಡಿ ಹೋಗುವವನು ನಾನಲ್ಲ: ಮುಂದಿನ ಎಲೆಕ್ಷನ್ ಗೆ ಟಿಕೆಟ್ ಸಿಗದಿದ್ರೂ ವಿಚಲಿತನಾಗಲ್ಲ- ಶಾಸಕ ಎಸ್.ಎ ರಾಮದಾಸ್.

ಮೈಸೂರು,ಅಕ್ಟೋಬರ್,3,2021(www.justkannada.in):  ಮಂತ್ರಿ ಸ್ಥಾನ ಕೊಡಲಿಲ್ಲ ಅಂತ ಓಡಿ ಹೋಗುವವನಲ್ಲ ನಾನು. ಮುಂದಿನ ಚುನಾವಣೆಯಲ್ಲಿ‌ ನನಗೆ ಟಿಕೆಟ್ ಸಿಗದಿದ್ದರೂ ವಿಚಲಿತನಾಗಲ್ಲ ಎಂದು ಬಿಜೆಪಿ ಶಾಸಕ ಎಸ್.ಎ ರಾಮದಾಸ್ ಹೇಳಿದ್ದಾರೆ.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಎಸ್.ಎ ರಾಮದಾಸ್, ನನಗೆ ಮಂತ್ರಿ ಸ್ಥಾನ ತಪ್ಪಿಸಲು ದೂರವಾಣಿ ಕರೆ ಮಾಡಿದವರಿಗೆ ಬಿಎಸ್‌ ವೈ ಸೇರಿದಂತೆ ಮಂತ್ರಿಗಳು ಉತ್ತರ ಕೊಟ್ಟಿದ್ದಾರೆ. ಮಂತ್ರಿ ಆಗದಿದ್ದರೂ ರಾಮದಾಸ್ ಸಮಾಜಕ್ಕೆ ಮಾದರಿ ಅಂತ ಬಿಎಸ್‌ ವೈ ಸೇರಿದಂತೆ ಮಂತ್ರಿಗಳಲ್ಲೆರೂ ಹೇಳಿದ್ದಾರೆ. ನನಗೆ ಅಷ್ಟೇ ಸಾಕು, ಮಂತ್ರಿ ಸ್ಥಾನಕ್ಕಿಂತ ಮಿಗಿಲಾದದ್ದು ಎಂದು ನುಡಿದರು.

ನನ್ನ ತಂದೆ‌ ಮಿಲಿಟರಿ ಅಧಿಕಾರಿ, ನನ್ನ ಮೈಯಲ್ಲಿ ಹರಿಯುತ್ತಿರುವುದು ಶುದ್ದ ರಕ್ತ. ನಮ್ಮ ತಂದೆ ತಾಯಿ ಕೈ ಕೆಸರು ಮಾಡಿಕೊಳ್ಳಬೇಡ ಅಂತ ಹೇಳಿದ್ದಾರೆ. ಮಂತ್ರಿ ಸ್ಥಾನ ಕೊಡಲಿಲ್ಲ ಅಂತ ಓಡಿ ಹೋಗುವವನಲ್ಲ ನಾನು. 1994 ರಲ್ಲಿ ಶ್ರೀಕಂಠದತ್ತ ಒಡೆಯರ್‌ ಗೆ ಟಿಕೆಟ್‌ ಕೊಟ್ಟಾಗ ವಿಚಲಿತನಾಗಲಿಲ್ಲ. ರಾತ್ರಿ ಟಿಕೆಟ್ ಪಡೆದು ಬೆಳಿಗ್ಗೆ ವೇಳೆಗೆ ಅವರು ರಾಜೀನಾಮೆ ಕೊಟ್ಟರು. ಮಧ್ಯಾಹ್ನದ ವೇಳೆ ಈ ರಾಮದಾಸ್‌ ಗೆ ಟಿಕೆಟ್ ಸಿಕ್ತು. 11 ಸಾವಿರ ಪೇಜ್ ಪ್ರಮುಖರನ್ನ ಸಂಘಟಿಸಿದ್ಧೇನೆ‌. ಕೆ.ಆರ್.ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಬೇಕೆಂಬುದು ನನ್ನ ಧ್ಯೇಯ. ಆಗಂತ ನನ್ನ ಕುಟುಂಬದವರಾರು ಚುನಾವಣೆಗೆ ನಿಲ್ಲಲ್ಲ‌. ನನ್ನ ಬಳಿಕ ‌ಕಾರ್ಯಕರ್ತರೊಬ್ಬರಿಗೆ ಟಿಕೆಟ್ ಸಿಗಬೇಕು ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು.

ಸಂದೇಶ್‌ ನಾಗರಾಜ್‌ ಬಿಜೆಪಿ ಸೇರ್ಪಡೆಗೆ ಮೂಲ ಬಿಜೆಪಿಗರ ವಿರೋಧಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ಎಸ್.ಎ ರಾಮದಾಸ್, ಪಕ್ಷದ ರಾಜ್ಯಾಧ್ಯಕ್ಷರು ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸುವ ಕೆಲಸ ಮಾಡ್ತಾರೆ. ಸಾಧಕ ಬಾಧಕಗಳ ಬಗ್ಗೆ ಇನ್ನು ಪೂರ್ಣ ಪ್ರಮಾಣದಲ್ಲಿ ಚರ್ಚೆಯಾಗಿಲ್ಲ. ನಮ್ಮಗಳ ಜೊತೆ ಇನ್ನೂ ಚರ್ಚೆ ಮಾಡಿಲ್ಲ. ಪಕ್ಷವನ್ನು ಕಟ್ಟಿ ಬೆಳೆಸಿದವರಿಗೆ ಆಧ್ಯತೆ ನೀಡಬೇಕೆಂಬ ಚಿಂತನೆ ಸಹ ಇದೆ. ನಿಜವಾದ ಕಾರ್ಯಕರ್ತರನ್ನ ಗುರುತಿಸುವ ಕೆಲಸ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Key words: I am -not – runs away-minister position- MLA- SA Ramadas.