ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ: ಮಂತ್ರಿಗಿರಿ ಸಿಗುವ ವಿಶ್ವಾಸ ವ್ಯಕ್ತಪಡಿಸಿದ ಬಿಜೆಪಿ ಶಾಸಕ..

ಬೆಂಗಳೂರು,ನವೆಂಬರ್,12,2020(www.justkannada.in):  ರಾಜ್ಯದಲ್ಲಿ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಜಯಸಾಧಿಸಿದ್ದು ಇದೀಗ ಸಚಿವ ಸಂಪುಟ ಪುನರಚನೆ ಅಥವಾ ವಿಸ್ತರಣೆ ವಿಚಾರ ಚರ್ಚೆಗೆ ಬಂದಿದೆ. ಇನ್ನು ಶೀಘ್ರವೇ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಸುಳಿವು ನೀಡಿದ್ದಾರೆ.kannada-journalist-media-fourth-estate-under-loss

ಈ ಮಧ್ಯೆ ಸಿಎಂ ಬಿಎಸ್ ವೈ ಕ್ಯಾಬಿನೆಟ್ ಸೇರಿಕೊಳ್ಳಲು ಬಿಜೆಪಿ ಶಾಸಕರು ಲಾಬಿ ನಡೆಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಬಿಜೆಪಿ ಹಿರಿಯ ಶಾಸಕ ಜಿಹೆಚ್ ತಿಪ್ಪಾರೆಡ್ಡಿ, ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಹಿರಿತನದ ಆಧಾರದ ಮೇಲೆ ಸಚಿವ ಸ್ಥಾನ ನೀಡುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.i-am-also-ministerial-candidate-bjp-mla-gh-thippareddy

ಸಚಿವ ಸಂಪುಟ ಪುನರಚನೆ ಮಾಡಿದರೇ ಒಳ್ಳೆಯದು. ಆದ್ರೆ ಇದು ಇಂಪಾರ್ಟೆಂಟ್ ಅಲ್ಲ. ನಾನು ಹಿರಿಯವನಾಗಿದ್ದರಿಂದ ಮಂತ್ರಿ ಸ್ಥಾನ ಕೇಳುತ್ತಿದ್ದೇನೆ. ಆದರೇ ಪದೇ ಪದೇ ಹೋಗಿ ಸಿಎಂಗೆ ಮುಜುಗರ ತರಲ್ಲ. ಪಕ್ಷಕ್ಕೆ ಮುಜುಗರ ತರುವ ಕೆಲಸ ಮಾಡಲ್ಲ ಎಂದು ಜಿಹೆಚ್ ತಿಪ್ಪಾರೆಡ್ಡಿ ತಿಳಿಸಿದರು.

Key words: I am- also -ministerial -candidate-BJP -MLA –gh thippareddy