Monday, August 31, 2026

BDA Apartments

Home Front Page ಸಿಎಂ ಸ್ಥಾನಕ್ಕೆ ನಾನೂ ಕೂಡ ಸಮರ್ಥನಿದ್ದೇನೆ- ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್.

ಸಿಎಂ ಸ್ಥಾನಕ್ಕೆ ನಾನೂ ಕೂಡ ಸಮರ್ಥನಿದ್ದೇನೆ- ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್.

ಬೆಂಗಳೂರು,ಮೇ,17,2023(www.justkannada.in): ಸಿಎಂ ಸ್ಥಾನಕ್ಕಾಗಿ ಸಿದ್ಧರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಸಮರವೇರ್ಪಟ್ಟಿದ್ದು ಈ ಮಧ್ಯೆ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಸಹ ನಾನೂ ಕೂಡ ಸಿಎಂ ಸ್ಥಾನಕ್ಕೆ ಅರ್ಹನಿದ್ದೇನೆ ಎಂದಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಪರಮೇಶ್ವರ್, ನನಗೆ ಹೈಕಮಾಂಡ್ ನಿಂದ ಕರೆ ಬಂದಿಲ್ಲ ಕರೆದರೇ ಹೋಗುತ್ತೇನೆ ಸಿಎಂ ಸ್ಥಾನಕ್ಕೆ ನಾನೂ ಕೂಡ ಸಮರ್ಥನಿದ್ದೇನೆ . ದಲಿತ ಸಿಎಂ ಮಾಡಬೇಕು ಎಂದು ನಾವು ಹೇಳಲ್ಲ. 75 ವರ್ಷಗಳಿಂದ ದಲಿತ ಸಮುದಾಯ ಕಾಂಗ್ರೆಸ್ ಪರ ಇದೆ. ಹೀಗಾಗಿ ಸಿಎಂ ಸ್ಥಾನ ನೀಡಬೇಕೆಂಬುದು ಸಮುದಾಯದ ಬೇಡಿಕೆ.  ಅಂತಿಮವಾಗಿ ಹೈಕಮಾಂಡ್  ತೀರ್ಮಾನ ಮಾಡುತ್ತದೆ. ಇಂದು ಸಂಜೆ ವೇಳೇಗೆ ಸಿಎಂ ಸ್ಥಾನ ಅಂತಿಮವಾಗಬಹುದು. ಎಂದರು.

ಸಿದ್ದರಾಮಯ್ಯ ಪರ ಶಾಸಕರ ಬೆಂಬಲ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್,  ಹೈಕಮಾಂಡ್ ಎಷ್ಟು ಶಾಸಕರ ಬೆಂಬಲ ಎಂದು  ಹೇಳಿಲ್ಲ. ನಂಬರ್ ಸಿದ್ಧರಾಮಯ್ಯ ಗೆಸ್ ಇರಬಹುದು . ತಮ್ಮ ಬಲ ಹೆಚ್ಚು ಎಂದು ತೋರಿಸಿಕೊಳ್ಳುತ್ತಿರಬಹುದು ಎಂದರು.

Key words: I am -also -capable – position -CM – former DCM -Dr. G. Parameshwar.