ಮೈಸೂರು,ಡಿಸೆಂಬರ್,30,2025(www.justkannada.in): ಹುಣಸೂರು ಪಟ್ಟಣದಲ್ಲಿ ಕಳೆದ ಎರಡು ದಿನದ ಹಿಂದೆ ನಡೆದ ಚಿನ್ನಾಭರಣ ದರೋಡೆ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಅಂದು ದರೋಡೆಕೋರರು ಕದ್ದಿದ್ದು 7 ಕೆ.ಜಿ. ಅಲ್ಲ, ಬರೋಬ್ಬರಿ 10 ಕೆ.ಜಿ. ಚಿನ್ನ ಕಳ್ಳತನ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ದರೋಡೆ ಮಾಡಲು 10 ಕ್ಕೂ ಹೆಚ್ಚು ಮಂದಿ ಪ್ಲಾನ್ ಮಾಡಿದ್ದರು. ಆದರೆ ಕಳ್ಳತನ ಮಾಡಿದ್ದು ಕೇವಲ 5 ಮಂದಿ.
ಚಿನ್ನದಂಗಡಿಯ ಮಾಲೀಕ ರಶೀದ್ ಅವರು ಕಳೆದ 6 ತಿಂಗಳ ಹಿಂದಷ್ಟೇ ಕೇರಳದಲ್ಲಿ 5 ಕೆ.ಜಿ. ಚಿನ್ನ ಖರೀದಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಚಿನ್ನ ಖರೀದಿ ವಿಚಾರದಲ್ಲಿ ಉಂಟಾದ ಮನಸ್ತಾಪವೇ ಕಳ್ಳತನಕ್ಕೆ ಕಾರಣವಾಯ್ತಾ ಎಂಬ ಅನುಮಾನ ಉಂಟಾಗಿದೆ.
ಸ್ಕೈ ಗೋಲ್ಡ್ ಅಂಡ್ ಡೈಮಂಡ್ ರಾಬರಿ ಮಾಡಿದ್ದ ಗ್ಯಾಂಗ್ ಕೇರಳದ್ದು ಎನ್ನುವ ಮಾಹಿತಿ ಲಭ್ಯವಾಗಿದ್ದು, ಕೇಂದ್ರಾದಳಿತ ಪ್ರದೇಶ ಪಾಂಡಿಚೇರಿಯ ಮಾಹೆನಲ್ಲಿ ದರೋಡೆಕೋರರು ಬಂದೂಕು ಖರೀದಿ ಮಾಡಿದ್ದರು ಎನ್ನಲಾಗಿದೆ. ಈಗಾಗಲೇ ಮೈಸೂರು ಪೊಲೀಸರು ಕೇರಳಕ್ಕೆ ತೆರಳಿದ್ದು ಆರೋಪಿಗಳ ಸೆರೆ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಪ್ರಕರಣದ ಬಗ್ಗೆ ಮೈಸೂರು ಎಸ್ಪಿ ಡಾ. ವಿಷ್ಣುವರ್ಧನ್ ಮಾಹಿತಿ ಪಡೆದಿದ್ದಾರೆ.
Key words: Big twist, Hunsur, jewellery, robbery case







