ಸಚಿವ ಶ್ರೀರಾಮುಲು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗುವವರು –ಮಾಜಿ ಸಚಿವ ವಿಜಯ ಶಂಕರ್ ಹೇಳಿಕೆ…

ಮೈಸೂರು,ನ,26,2019(www.justkannada.in): ಶ್ರೀರಾಮುಲು ಕೇವಲ ಡಿಸಿಎಂ ಅಭ್ಯರ್ಥಿಯಲ್ಲ. ಶ್ರೀರಾಮುಲು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಆಗುವವರು ಎಂದು ಮಾಜಿ ಸಚಿವ ವಿಜಯ ಶಂಕರ್ ಹೇಳಿದರು.

ಕಾಮಗೊಂಡನಹಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಪರ  ಪ್ರಚಾರ ಕಾರ್ಯದ ವೇಳೆ ಮಾತನಾಡಿದ ಮಾಜಿ ಸಚಿವ ವಿಜಯ ಶಂಕರ್, ವಾಲ್ಮೀಕಿ ಮಹರ್ಷಿಯಾಗಿ ಬದಲಾವಣೆ ಕಂಡುಕೊಂಡರು. ಈಗ ಅದೇ ರೀತಿ‌ ಶ್ರೀರಾಮುಲು ಕೂಡ ಬದಲಾವಣೆಗೊಂಡಿದ್ದಾರೆ. ಮಹರ್ಷಿಗಳ ರೀತಿ ಆಚಾರ ವಿಚಾರಗಳನ್ನು‌ ಬದಲಿಸಿಕೊಂಡಿದ್ದಾರೆ. ಇವತ್ತು ಯಾವ ಶರಣರೂ ಮಾಡದ ರೀತಿ ಪೂಜೆ ಪುನಸ್ಕಾರ ಮಾಡ್ತಾರೆ. ಮಹಿಮಾಯಕ್ಕೆ ಹೋಗಿ ಧೀಕ್ಷೆ ಪಡೆದು ಬಂದಿದ್ದಾರೆ. ನಾನು ಹಿಂದೆ ಬಿಜೆಪಿಯಲ್ಲಿ ಇದ್ದಾಗ ಶ್ರೀರಾಮುಲು ಜೊತೆಗೆ ರಾಜ್ಯ ಪ್ರವಾಸ ಮಾಡಿದ್ದೇನೆ. ಶ್ರೀರಾಮುಲುಗೆ ಇರುವ ತಾಳ್ಮೆ ಈಗ ಯಾರಿಗೂ ಇಲ್ಲ. ಸ್ವತಃ ಯಡಿಯೂರಪ್ಪನವರೇ ಅದನ್ನ ನೋಡಿ ನೀನು ಮಹರ್ಷಿಯಾಗಬೇಕಿತ್ತು, ಇಡೀ ಸಮಾಜ ಉದ್ದಾರ ಆಗಿರೋದು ಎಂದಿದ್ದರು ಎಂದು ಹೊಗಳಿದರು.

ಶ್ರೀರಾಮುಲು ಕೇವಲ ಡಿಸಿಎಂ ಅಭ್ಯರ್ಥಿಯಲ್ಲ.  ಶ್ರೀರಾಮುಲು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಆಗುವವರು. ಹೀಗಾಗಿ ಎಲ್ಲ ಸಮುದಾಯದವರೂ ಒಟ್ಟಾಗಿ  ಅವರ ಬೆನ್ನಿಗೆ‌ ನಿಲ್ಲಬೇಕು. ಹುಣಸೂರು ಕ್ಷೇತ್ರದಲ್ಲಿ ಎಚ್. ವಿಶ್ವನಾಥ್ ಗೆಲ್ಲಿಸಿ ಶ್ರೀರಾಮುಲು ಗೌರವ ಉಳಿಸಬೇಕು ಎಂದು ಮಾಜಿ ಸಚಿವ ವಿಜಯ ಶಂಕರ್ ಮನವಿ ಮಾಡಿದರು.

Key words: hunsur-by election- Sriramulu -next chief ministerial- candidate- former minister- Vijaya Shankar.