Wednesday, July 29, 2026

BDA Apartments

Home Front Page ಬೃಹತ್ ಏಕಶಿಲಾ ಸುಬ್ರಹ್ಮಣ್ಯ ಮೂರ್ತಿಗೆ ರಾಜವಂಶಸ್ಥ ಯದುವೀರ್ ರಿಂದ ಪುಷ್ಪಾರ್ಚನೆ.

ಬೃಹತ್ ಏಕಶಿಲಾ ಸುಬ್ರಹ್ಮಣ್ಯ ಮೂರ್ತಿಗೆ ರಾಜವಂಶಸ್ಥ ಯದುವೀರ್ ರಿಂದ ಪುಷ್ಪಾರ್ಚನೆ.

ಮೈಸೂರು,ಅಕ್ಟೋಬರ್,18,2021(www.justkannada.in): ನಂಜನಗೂಡು ತಾಲ್ಲೂಕಿನ ಗಟ್ಟವಾಡಿ ರಸ್ತೆಯಲ್ಲಿರುವ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲು ಉದ್ದೇಶಿಸಿರುವ ಬೃಹತ್ ಏಕಶಿಲಾ ಸುಬ್ರಹ್ಮಣ್ಯ ಮೂರ್ತಿಗೆ ಇಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪುಷ್ಪಾರ್ಚನೆ ಮಾಡಿದರು.

ಮೈಸೂರು ನಗರದ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಬೃಹತ್ ಏಕಶಿಲಾ ಸುಬ್ರಹ್ಮಣ್ಯ ಮೂರ್ತಿಗೆ  ಯದುವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪುಷ್ಪಾರ್ಚನೆ ಸಲ್ಲಿಸಿದರು. ಏಕಶಿಲಾ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪೂಜೆ ಬಳಿಕ ಗಣ್ಯರು ಪುಷ್ಪಾರ್ಚನೆ ನೆರವೇರಿಸಿದರು.

ನಂಜನಗೂಡು ತಾಲೂಕಿನ ಗಟ್ಟವಾಡಿ ರಸ್ತೆಯಲ್ಲಿರುವ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸುಮಾರು 36 ಅಡಿ ಎತ್ತರದಲ್ಲಿ 18 ಅಡಿ ಎತ್ತರದ ಈ ಏಕಶಿಲಾ ಸುಬ್ರಹ್ಮಣ್ಯ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.

Key words: Huge- monolithic –Subramanya- statue –special  worship-Yaduveer krishnadatta chamaraj wodeyar