ಮತ್ತೆ ಹುಚ್ಚಾಟ ಮೆರೆದ ಹುಚ್ಚಾ ವೆಂಕಟ್ : ಡ್ರಾಪ್ ಕೊಡುವುದಾಗಿ ನಿಂತಿದ್ದ ಯುವತಿಗೆ ಕಿರುಕುಳ….

ಬೆಂಗಳೂರು,ಅ,4,2019(www.justkannada.in): ಮಡಿಕೇರಿ ಮತ್ತು ಮಂಡ್ಯದಲ್ಲಿ ರಂಪಾಟ ಮಾಡಿದ್ದ ಹುಚ್ಚ ವೆಂಕಟ್ ಇದೀಗ ಮತ್ತೆ ತನ್ನ ಹುಚ್ಚಾಟ ಮೆರೆದಿದ್ದು ಕಾಲೇಜು ಯುವತಿ ಜತೆ ಅನುಚಿತ ವರ್ತನೆ ತೋರಿರುವ ಘಟನೆ ನಡೆದಿದೆ.

ಯಲಹಂಕ ದೊಡ್ಡಬಳ್ಳಾಪುರ ರಸ್ತೆಯ ಅರದೇಶನಹಳ್ಳಿ ಟೋಲ್ ಬಳಿ ಘಟನೆ ಈ ಘಟನೆ ನಡೆದಿದೆ. ರಸ್ತೆಯಲ್ಲಿ ನಿಂತಿದ್ದ ಯುವತಿಗೆ ಡ್ರಾಪ್ ಕೊಡುವುದಾಗಿ ಹುಚ್ಚ ವೆಂಕಟ್ ಕಿರುಕುಳ ನೀಡಿದ್ದಾರೆ. ಜೊತೆಗೆ ತನ್ನ ಕಾರಿನ ಗಾಜನ್ನ ತಾನೆ ಕಲ್ಲಿನಿಂದ ಹೊಡೆದುಕೊಂಡು ರಂಪಾಟ ನಡೆಸಿದ್ದಾರೆ. ಯುವತಿ ಕಾರು ಹತ್ತಲ್ಲ ಅಂದಿದಕ್ಕೆ ಯುವತಿ  ಜತೆ ಹುಚ್ಚಾ ವೆಂಕಟ್ ವಾಗ್ವಾದ ನಡೆಸಿದ್ದು, ಕೂಡಲೇ ಸ್ಥಳಿಯರು ಯುವತಿಯ ನೆರವಿಗೆ ಬಂದಿದ್ದಾರೆ.

ಈ ವೇಳೆ ಸ್ಥಳೀಯರು ಬುದ್ದಿಹೇಳಿದ್ದಕ್ಕೆ ಹುಚ್ಚಾ ವೆಂಕಟ್ ಸ್ಥಳಿಯರ ಮೇಲೆಯೇ ಗರಂ ಆಗಿದ್ದು, ಹುಚ್ಚಾ ವೆಂಕಟ್ ಹುಚ್ಚಾಟಕ್ಕೆ ಸ್ಥಳಿಯರ ಆಕ್ರೋಶ ವ್ಯಕ್ತಡಿಸಿದ್ದಾರೆ. ನೆನ್ನೆ ಸಂಜೆ ಘಾಟಿಗೆ ಹೋಗಿದ್ದ ಹುಚ್ಚಾ ವೆಂಕಟ್,  ಘಾಟಿಯಲ್ಲು ಸಾರ್ವಜನಿಕರ ಮೇಲೆ ಕೂಗಾಡಿ ಹುಚ್ಚಾಟ ಮೆರೆದಿದ್ದರು. ಇಂದು ಬೆಳಗ್ಗೆ ಘಾಟಿಯಿಂದ ಬೆಂಗಳೂರಿನತ್ತ ಬರುವಾಗ ಮತ್ತ ಟೋಲ್ ಬಳಿ ರಾದ್ಧಾಂತ ನಡೆಸಿದ್ದಾರೆ.

Key words: huccha Venkat-Harassment- collage girl -drop