Thursday, August 20, 2026

BDA Apartments

Home Front Page ಹುಬ್ಬಳ್ಳಿ ಯುವತಿ ಕೊಲೆ ಪ್ರಕರಣ: ಲವ್ ಜಿಹಾದ್ ಆಯಾಮದಲ್ಲಿ ತನಿಖೆ ನಡೆಸಿ- ಕೇಂದ್ರ ಸಚಿವ ಪ್ರಹ್ಲಾದ್...

ಹುಬ್ಬಳ್ಳಿ ಯುವತಿ ಕೊಲೆ ಪ್ರಕರಣ: ಲವ್ ಜಿಹಾದ್ ಆಯಾಮದಲ್ಲಿ ತನಿಖೆ ನಡೆಸಿ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

ಹುಬ್ಬಳ್ಳಿ, ಏಪ್ರಿಲ್, 19,2024 (www.justkannada.in): ನಿನ್ನೆ  ಹುಬ್ಬಳ್ಳಿಯಲ್ಲಿನ ಕಾಂಗ್ರೆಸ್‌ ಕಾರ್ಪೋರೇಟರ್ ಮಗಳು ನೇಹಾ ಹಿರೇಮಠ ಅವರನ್ನ ಕಾಲೇಜಿನಲ್ಲೇ ಪಾಗಲ್‌ ಪ್ರೇಮಿ ಫಯಾಜ್  ಕೊಲೆ ಮಾಡಿರುವ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಪ್ರಕರಣವನ್ನು ಲವ್ ಜಿಹಾದ್ ಆಯಾಮದಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಕರಣ ಕುರಿತು ಮಾತನಾಡಿದ ಪ್ರಹ್ಲಾದ್ ಜೋಶಿ, ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಎಂಬ ಯುವತಿ ಬರ್ಬರ ಹತ್ಯೆಯಾಗಿದೆ. ಇದನ್ನು ನೋಡಿದರೆ ರಾಜ್ಯದಲ್ಲಿ  ಕಾನೂನು  ಸುವ್ಯವಸ್ಥೆ ಹದೆಗಟ್ಟಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ತುಷ್ಟೀರಣ ನೀತಿ ಕಾರಣದಿಂದ ರಾಜ್ಯದಲ್ಲಿ ಸಮಾಜ ಘಾತಕರಿಗೆ ಭಯ ಇಲ್ಲದಂತಾಗಿದೆ. ಇಂತಹ ಘಟನೆಗಳನ್ನು ಕಾಂಗ್ರೆಸ್ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ನಾನು ಅವರ ಮೃತ ಯುವತಿ ತಂದೆ ಕಾರ್ಪೋರೇಟರ್ ನಿರಂಜನ್ ಹಿರೇಮಠ ಅವರೊಂದಿಗೆ ಮಾತನಾಡಿದ್ದೇನೆ. ಪುತ್ರಿ ನೇಹಾ ಯಾವುದೇ ಪ್ರೀತಿ ಮಾಡಿಲ್ಲ. ಲವ್ ಮಾಡಿದರೆ ಅವರನ್ನು ಕೊಲೆ ಮಾಡಬೇಕು ಎಂದೇನಾದರೂ ಇದಿಯೇ? ಎಂದು ಪ್ರಹ್ಲಾದ್ ಜೋಶಿ ಕಿಡಿಕಾರಿದರು.

Key words: Hubli, murder, case, Prahlad Joshi