ಬರ್ತ್ ಡೇ ಪಾರ್ಟಿಯಲ್ಲಿ ಅಪ್ಪು ಹೇಗಿದ್ದರು…? ಮಾಹಿತಿ ನೀಡಿದ ಗುರುಕಿರಣ್

ಬೆಂಗಳೂರು, ಅಕ್ಟೋಬರ್ 30, 2021 (www.justkannada.in): ಗುರುವಾರ ರಾತ್ರಿ ಸಂಗೀತ ನಿರ್ದೇಶಕ ಗುರುಕಿರಣ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಅಪ್ಪು ಹೇಗಿದ್ದರು ಎಂಬ ಕುರಿತು ಸ್ವತಃ ಗುರುಕಿರಣ್ ಮಾತನಾಡಿದ್ದಾರೆ.

ತುಂಬಾ ದಿನಗಳ ನಂತರ ಪುನೀತ್ ಅವರನ್ನು ಭೇಟಿ ಮಾಡಲಾಗಿತ್ತು. ತುಂಬಾ ಸಮಯದವರೆಗೆ ಹಲವು ವಿಷಯಗಳ ಕುರಿತು ನಮ್ಮೊಂದಿಗೆ ಮಾತನಾಡಿದರು ಎಂದು ಗುರುಕಿರಣ್ ತಿಳಿಸಿದ್ದಾರೆ.

ರಾತ್ರಿಯೇ ಪುನೀತ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು ಎಂದು ಕೆಲವರು ಹೇಳುತ್ತಿದ್ದಾರೆ. ಆದ್ರೆ ಪುನೀತ್ ತುಂಬಾನೇ ಲವಲವಿಕೆಯಿಂದ ನಮ್ಮ ಜೊತೆಯಲ್ಲಿದ್ದರು. ಆಯಾಸ, ಬಳಲಿಕೆಯೂ ನಮಗೆ ಕಾಣಿಸಲಿಲ್ಲ ಎಂದು ಗುರುಕಿರಣ್ ಹೇಳಿದ್ದಾರೆ.

ಪಾರ್ಟಿಯಲ್ಲಿದ್ದ ನಟ ಅನಿರುದ್ಧ್, ರಮೇಶ್ ಅರವಿಂದ್ ಕೂಡ ಅಪ್ಪು ಆರೋಗ್ಯದ ಕುರಿತು ಮಾಹಿತಿ ನೀಡಿದ್ದಾರೆ. ತಮ್ಮ ಫಿಟ್ನೆಸ್, ಸೈಕಲ್ ಸವಾರಿಯ ಅಭ್ಯಾಸ ಮತ್ತು ವ್ಯಾಯಾಮ ಸೇರಿದಂತೆ ಹಲವು ವಿಷಯಗಳ ಬಗ್ಗೆ ನಮ್ಮೊಂದಿಗೆ ಮಾತನಾಡಿದ್ದರು ಎಂದು ಸ್ಮರಸಿದ್ದಾರೆ.