ನಮ್ಮ ಹಣ ಪಡೆದು ಚುನಾವಣೆ ಮಾಡಿ ನಮಗೆ  ದ್ರೋಹ ಮಾಡಿದ್ರು-  ಮತ್ತೆ ಸಿದ್ಧರಾಮಯ್ಯ ವಿರುದ್ದ ಗುಡುಗಿದ ಎಂಟಿಬಿ ನಾಗರಾಜ್….

kannada t-shirts

ಬೆಂಗಳೂರು,ನ,20,2019(www.justkannada.in):  ಸಿದ್ಧರಾಮಯ್ಯ ನಮ್ಮ ಹಣ ಪಡೆದು ಚುನಾವಣೆ ಮಾಡಿ ಈಗ ನಮಗೆ ದ್ರೋಹ ಮಾಡಿದ್ರು ಎಂದು ಹೊಸಕೋಟೆ ಬಿಜೆಪಿ ಶಾಸಕ ಎಂಟಿಬಿ ನಾಗರಾಜ್ ಗುಡುಗಿದರು.

ಬೆಂಗಳೂರಿನಲ್ಲಿ ಇಂದು ಮಾಧ್ಯಮದವರ ಜತೆ ಮಾತನಾಡಿದ ಎಂಟಿಬಿ ನಾಗರಾಜ್, ಸಿದ್ಧರಾಮಯ್ಯ ಅವರೇ ನಮಗೆ ಚೂರಿ ಹಾಕಿದ್ದು. ಅವರೇ ನಮ್ಮನ್ನ ಅನರ್ಹಗೊಳಿಸಿದ್ದು. ನಮ್ಮ ಹಣ ಪಡೆದು ಚುನಾವಣೆ ಮಾಡಿದರು. ಈಗ ನಮಗೆ ದ್ರೋಹ ಮಾಡಿದ್ದಾರೆ. ಸಿದ್ಧರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಸರಿಯಾಗಿ ನಿರ್ವಹಣೆ ಮಾಡಲಿಲ್ಲ. ಯಾರನ್ನೂ ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಕಿಡಿಕಾರಿದರು.

ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಹೋದರೇ ಪ್ರಾಮಾಣಿಕತೆ ಇಲ್ಲವೆಂದಲ್ಲ. ಹಾಗಾದರೇ ಸಿದ್ಧರಾಮಯ್ಯ ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಹೋಗಿಲ್ವಾ..? ಎಂದು ಎಂಟಿಬಿ ನಾಗರಾಜ್ ಪ್ರಶ್ನಿಸಿದರು.

Key words: hoskote-by-election – MTB Nagaraj -again –against- Siddaramaiah.

website developers in mysore