ಇಡಿ ಏನು ಬೇಕಾದರೂ ಪರಿಶೀಲಿಸಲಿ: ಸಹಕಾರ ನೀಡುತ್ತೇವೆ- ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಮೇ,22,2025 (www.justkannada.in): ತಮ್ಮ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಮೇಲೆ ಇಡಿ ದಾಳಿ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಇಡಿ ಏನು ಬೇಕಾದರೂ ಪರಿಶೀಲಿಸಲಿ. ನಾವು ಸಹಕಾರ ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಸಚಿವ ಡಾ.ಜಿ.ಪರಮೇಶ್ವರ್, ಎಲ್ಲರಿಗೂ ಕಾನೂನು ಒಂದೇ, ಆ ಕಾನೂನನ್ನು ನಾನು ಗೌರವಿಸುತ್ತೇನೆ. ಇಡಿ ಅಧಿಕಾರಿಗಳಿಗೆ ನಮ್ಮ ಸಂಸ್ಥೆ ಸಹಕಾರ ನೀಡಲಿದೆ. ಇಡಿ ದಾಳಿ ಮಾಡಿರುವ ಉದ್ದೇಶ ಏನು ಅಂತಾ ಗೊತ್ತಿಲ್ಲ. ಅಕೌಂಟ್ಸ್, ದಾಖಲೆಗಳನ್ನೂ ಇಡಿ ಅಧಿಕಾರಿಗಲು ಕೇಳಿದ್ದಾರೆ. ಇಡಿ. ಅಧಿಕಾರಿಗಳ ಪರಿಶೀಲನೆ  ಮುಂದುವರೆದಿದೆ ಎಂದರು.

ಸಚಿವ ಡಾ.ಜಿ.ಪರಮೇಶ್ವರ್ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಹೆಗ್ಗೆರೆ ಬಳಿಯಿರುವ ಸಿದ್ಧಾರ್ಥ್ ಮೆಡಿಕಲ್ ಕಾಲೇಜು, ಎಸ್ ಎಸ್ ಐಟಿ ಕಾಲೇಜು  ಮೇಲೆ ಇಡಿ ಅಧಿಕಾರಿಗಳು ನಿನ್ನೆ ದಾಳಿ ನಡೆಸಿದ್ದರು.

Key words: ED, Raid, investigate, Home Minister, Parameshwar