ಮುಸ್ಲೀಂ ಮುಖಂಡರ ಜೊತೆ ಗೃಹ ಸಚಿವ ಪರಮೇಶ್ವರ್ ಸಭೆ: ಭಾರಿ ಗದ್ದಲ

ಮಂಗಳೂರು,ಮೇ,3,2025 (www.justkannada.in): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಶ್ರಫ್ ಗುಂಪು ಹತ್ಯೆ ಮತ್ತು ಸುಹಾಸ್ ಶೆಟ್ಟಿ ಹತ್ಯೆ ಘಟನೆ ನಡೆದ ಹಿನ್ನೆಲೆಯಲ್ಲಿ ಇಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಂಗಳೂರಿಗೆ ಭೇಟಿ ನೀಡಿ ಮುಸ್ಲೀಂ ಮುಖಂಡರ ಜೊತೆ ಸಭೆ ನಡೆಸಿದ್ದಾರೆ.

ಸರ್ಕೀಟ್ ಹೌಸ್ ನಲ್ಲಿ ಗೃಹ ಸಚಿವ ಪರಮೇಶ್ವರ್ ಸಭೆ ನಡೆಸಿದ್ದು,  ಸಭೆಯಲ್ಲಿ ಮುಸ್ಲೀಂ ಮುಖಂಡರು ಕೇರಳದ ಅಶ್ರಫ್ ಗುಂಪು ಹತ್ಯೆ ವಿಚಾರವನ್ನ ಪ್ರಸ್ತಾಪಿಸಿ ಗೃಹ ಸಚಿವರನ್ನ ತರಾಟೆ ತೆಗೆದುಕೊಂಡಿದ್ದಾರೆ.

ಪಾಕ್ ಜಿಂದಾಬಾದ್ ಎಂದಿದ್ದಕ್ಕೆ ಹತ್ಯೆ ಎಂದು ಪರಮೇಶ್ವರ್ ಹೇಳಿಕೆ ನೀಡಿದ್ದರು. ಇದೇ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮುಸ್ಲೀಂ ಮುಖಂಡರು ತರಾಟೆ ತೆಗೆದುಕೊಂಡಿದ್ದು, ಯಾವ ಆಧಾರದಲ್ಲಿ ಹೇಳಿಕೆ ಕೊಟ್ಟಿರಿ ಎಂದು ಕಿಡಿಕಾರಿದ್ದಾರೆ. ಸಭೆಯಲ್ಲಿ ಭಾರಿ ಗದ್ದಲ ಉಂಟಾಯಿತು.

ಪ್ರಕರಣ ಸಂಬಂಧ ಸ್ಥಳೀಯ ಮುಖಂಡರಿಂದ ಪರಮೇಶ್ವರ್ ಗೆ ಮಾಹಿತಿ ಪಡೆದರು. ಗೃಹ ಸಚಿವ ಪರಮೇಶ್ವರ್ ಗೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಾಥ್ ನೀಡಿದರು.

Key words: Home Minister, Parameshwar, meets, Muslim leaders