ಬೆಂಗಳೂರು,ಏಪ್ರಿಲ್,7,2026 (www.justkannada.in): ಕೇಂದ್ರ ಸರ್ಕಾರ ನಮಗೆ ಕೊಡಬೇಕಾದ ಎಲ್ ಪಿಜಿ ಗ್ಯಾಸ್ ಕೊಡಬೇಕು ನಮಗೊಂದು ಬೇರೆಯವರಿಗೊಂದು ಆಗೋದು ಬೇಡ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಆಟೋ ಗ್ಯಾಸ್ ಗಳ ಅಭಾವ ವಿಚಾರ ಸಂಬಂಧ ಈಗಾಗಲೇ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದಿಂದ ಪತ್ರ ಬರೆಯಲಗಿದೆ. ನಮಗೆ ಕೊಡಬೇಕಾದ ಸಿಲಿಂಡರ್ ಪೂರೈಕೆ ಮಾಡಿ ಎಂದಿದ್ದೇವೆ.
ಕೆಎಚ್ ಮುನಿಯಪ್ಪ ಸಹ ಕೇಂದ್ರದ ಸಂಪರ್ಕದಲ್ಲಿದ್ದಾರೆ ಕೇಂದ್ರ ಸರ್ಕಾರ ನಮಗೆ ಕೊಡಬೇಕಾದ ಎಲ್ ಪಿಜಿ ಕೊಡಬೇಕು ನಮಗೊಂದು ಬೇರಯವರಿಗೊಂದು ಆಗೋದು ಬೇಡ. ಈ ಸಮಸ್ಯೆ ನಿರ್ವಹಣೆಗೆ ಸಿಎಂ ಯಾರನ್ನದರೂ ನಿಯೋಜಿಸಬಹದು. ಮುನಿಯಪ್ಪ ಅಧಿಕಾರಿಗಳನ್ನ ನಿಯೊಜಿಸಿ ಸಂಪರ್ಕದಲ್ಲಿರುವಂತೆ ಮಾಡುತ್ತಾರೆ ಎಂದು ಪರಮೇಶ್ವರ್ ಹೇಳಿದರು.
Key words: central government, LPG gas, Home Minister, Parameshwar







