ಬೆಂಗಳೂರು,ಮಾರ್ಚ್,3,2026 (www.justkannada.in): ಇರಾನ್ ಸರ್ವೋಚ್ಚ ನಾಯಕ ಖಮನೈ ಹತ್ಯೆ ಖಂಡಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ವಿಚಾರ, ನಿಗದಿತ ಸ್ಥಳ ಬಿಟ್ಟು ಬೇರೆ ಕಡೆ ಧರಣಿ ನಡೆಸಿದ್ದು ನಿಯಮ ಬಾಹಿರ ತಪ್ಪಾಗಿದ್ದರೇ ಪರಿಶೀಲಿಸಿ ಕ್ರಮಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಾ.ಜಿ.ಪರಮೇಶ್ವರ್, ಫ್ರೀಡಂಪಾರ್ಕ್ ನಲ್ಲಿ ಧರಣಿ ನಡೆಸಲು ಕೋರ್ಟ್ ಹೇಳಿದೆ ಮೊನ್ನೆ ಪ್ರತಿಭಟನೆ ಮಾಡಿದವರ ವಿರುದ್ದ ಕ್ರಮದ ಬಗ್ಗೆ ಚರ್ಚೆ ಮಾಡುತ್ತೇವೆ ಶಾಶಕ ಹ್ಯಾರಿಸ್ ಸೇರಿ ಯಾರ ಇರಲಿ ನಿಯಮ ಪ್ರಕಾರ ಧರಣಿ ಮಾಡಬೇಕು ತಪ್ಪಾಗಿದ್ದರೇ ಪರಿಶೀಲಿಸಿ ಕ್ರಮಕೈಗೊಳ್ಳುತ್ತೇವೆ ಎಂದರು.
ಯುದ್ದಪೀಡಿತ ದೇಶಗಳಲ್ಲಿ ಕನ್ನಡಿಗರು ಸಿಲುಕಿರುವ ವಿಚಾರ, ದುಬೈನಲ್ಲಿ 28 ಜನ ಕನ್ನಡಿಗರು ಇದ್ದಾರೆ ಎಂಬ ಮಾಹಿತಿ ಇದೆ. ಕೇಂದ್ರ ಸರ್ಕಾರದ ನಿರ್ದೇಶನ ಪಾಲನೆ ಮಾಡಬೇಕು ಎಂದು ಪರಮೇಶ್ವರ್ ತಿಳಿಸಿದರು.
Key words: Protests, action, Home Minister, Parameshwar







