ರಾಜ್ಯಪಾಲರು ದ್ವೇಷ ಭಾಷಣ ಬಿಲ್ ಸ್ವೀಕಾರವೂ ಮಾಡಿಲ್ಲ, ತಿರಸ್ಕಾರವೂ ಮಾಡಿಲ್ಲ- ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಜನವರಿ,10,2026 (www.justkannada.in): ರಾಜ್ಯಪಾಲರು ದ್ವೇಷಭಾಷಣ ಬಿಲ್ ಸ್ವೀಕಾರವೂ ಮಾಡಿಲ್ಲ, ತಿರಸ್ಕಾರವೂ ಮಾಡಿಲ್ಲ ಎಂದು  ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ರಾಜ್ಯಪಾಲರು ಬಿಲ್ ಅನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ತಿರಸ್ಕಾರ ಮಾಡಿಲ್ಲ. ಮಸೂದೆಯನ್ನು ಸ್ವೀಕಾರವೂ ಮಾಡಿಲ್ಲ ತಿರಸ್ಕಾರ ಕೂಡ ಮಾಡಿಲ್ಲ.  ಬಿಲ್ ರಿಜೆಕ್ಟ್ ಮಾಡಿದ ಮೇಲೆ ಏನು ಮಾಡಬೇಕೆಂದು ತೀರ್ಮಾನ ಮಾಡುತ್ತೇವೆ. ಅಮೇಲೆ ಸರ್ಕಾರ ನಿರ್ಧಾರ ಮಾಡುತ್ತದೆ ಎಂದರು.

ಸರ್ಕಾರದಿಂದ 22 ರಿಂದ 25 ಬಿಲ್ ಗಳನ್ನು ರಾಜ್ಯಪಾಲರಿಗೆ ಕಳಿಸಿದ್ದವು. ಬಹಳಷ್ಟು ಬಿಲ್ ಗಳಿಗೆ ಸಹಿ ಮಾಡಿ ಕಳುಹಿಸಿದ್ದಾರೆ.  ಕೆಲವು ಬಿಲ್ ಗಳು ಮಾತ್ರ ಇನ್ನೂ ರಾಜ್ಯಪಾಲರ ಬಳಿಯೇ ಇದೆ. ಒಳ ಮೀಸಲಾತಿ ವಿಚಾರವಾಗಿ ರಾಜ್ಯಪಾಲರು ಸ್ಪಷ್ಟನೆ ಕೇಳಿದ್ದಾರೆ. ಅವರು ಕೂಡ ಈ ಬಿಲ್ ಓದಿದ ಬಳಿಕ ಒಪ್ಪಿಗೆ  ಕೊಡಬಹುದು ಎಂದು ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.

Key words:  Governor, hate speech bill, Home Minister, Parameshwar