ತುಮಕೂರು,ಡಿಸೆಂಬರ್,15,2025 (www.justkannada.in): ಬೆಂಗಳೂರು ರೀತಿ ಗ್ರೇಟರ್ ತುಮಕೂರು ಮಾಡಲು ಚಿಂತನೆ ನಡೆಸಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಗ್ರೇಟರ್ ತುಮಕೂರು ಮಾಡಲು ಸರ್ಕಾರಕ್ಕೆ ಪ್ರಸ್ತಾವನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು ಬೆಂಗಳೂರು ಮಾದರಿಯಲ್ಲಿ ತುಮಕೂರು ಪಾಲಿಕೆ ಬದಲಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ
ಈಗಾಗಲೇ ಬೆಂಗಳೂರಲ್ಲಿ ಬಿಬಿಎಂಪಿಯನ್ನು ಐದು ಮಹಾನಗರ ಪಾಲಿಕೆಗಳಾಗಿ ಮಾಡಲಾಗಿದೆ. ತುಮಕೂರಿನ ಹತ್ತಿರದ ವರೆಗೂ ಬೆಂಗಳೂರು ಬೆಳೆದಿದೆ ಅದೇ ರೀತಿ ಗ್ರೇಟರ್ ತುಮಕೂರು ಮಾಡಲು ಮುಂದಾಗಿದ್ದೇವೆ. ಸದ್ಯದಲ್ಲೇ ಈ ವಿಚಾರವಾಗಿ ತೀರ್ಮಾನ ಆಗಲಿದೆ ಎಂದು ಜಿ ಪರಮೇಶ್ವರ್ ತಿಳಿಸಿದರು.
Key words: Planning, Greater Tumkur, Home Minister, Parameshwar







