ಡಿಜಿಟಲ್ ಅರೆಸ್ಟ್ ವಂಚನೆ ಕೇಸ್ ಗಂಭೀರ ಪರಿಗಣನೆ: ಶೀಘ್ರವೇ ಆರೋಪಿಗಳ ಬಂಧನ- ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ನವೆಂಬರ್,18,2025 (www.justkannada.in): ಮಹಿಳಾ ಟೆಕ್ಕಿಯೊಬ್ಬರಿಗೆ ಡಿಜಿಟಲ್ ಅರೆಸ್ಟ್‍ ವಂಚನೆ ಪ್ರಕರಣಕ್ಕೆ ಸಂಬಂಧ ಗಂಭೀರವಾಗಿ ಪರಿಗಣಿಸಿದ್ದೇವೆ. ಶೀಘ್ರವೇ ಆರೋಪಿಗಳನ್ನ ಬಂಧಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಇತ್ತೀಚೆಗ ಡಿಜಿಟಲ್ ಅರೆಸ್ಟ್ ಪ್ರಕರಣಗಳು ಆತಂಕ ಹುಟ್ಟಿಸಿವೆ ಈಗ ಮಹಳಾ ಟೆಕ್ಕಿಯೊಬ್ಬರಿಗೆ ಮೋಸ  ಆಗಿದೆ. ಕಳೆದ 1 ವರ್ಷದಿಂದ ಮಹಿಳಾ ಟೆಕ್ಕಿ ಬಳಿ ಹಣ ಪಡೆಯುತ್ತಿದ್ದರು. ವಂಚನೆಗೊಳಗಾದ ಮಹಿಳಾ ಟೆಕ್ಕಿ ಈಗಾಗಲೇ ದೂರು  ನೀಡಿದ್ದು, ಡಿಜಿಟಲ್ ಅರೆಸ್ಟ್ ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದೇವೆ. ತನಿಖೆ ನಡೆಯುತ್ತಿದೆ. ಶೀಘ್ರವೇ ಆರೋಪಿಗಳನ್ನ ಬಂಧಿಸಲಾಗುವುದು ಎಂದರು.

ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನ ಸಿಎಂ ಸಿದ್ದರಾಮಯ್ಯ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪರಮೇಶ್ವರ್, ಇಬ್ಬರು ನಾಯಕರ ಭೇಟಿಯಲ್ಲಿ ಏನು ಚರ್ಚೆ ಆಗಿದೆ ಗೊತ್ತಿಲ್ಲ ನಾನೂ ಇನ್ನೂ ಸಿಎಂ ಭೇಟಿ ಮಾಡಿಲ್ಲ. ಏನ್ ಸ್ವಾಮಿ ಏನು ಮಾತಾಡ್ಕೊಂಡು ಬಂದ್ರಿ ಅಂತಾ ಕೇಳ್ತೀನಿ  ಎಂದರು.

Key words: Digital arrest, fraud case, arrested, soon, Home Minister, Parameshwar