ಬೆಂಗಳೂರು,ಆಕ್ಟೋಬರ್,6,2025 (www.justkannada.in): ಆದಷ್ಟು ಬೇಗ ಧರ್ಮಸ್ಥಳ ಪ್ರಕರಣಧ ವರದಿ ಕೊಡಲು ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಬೇರೆ ಬೇರೆ ಅನಾಲಿಸಿಸ್ ಆಗ್ತಿದೆ. ಇದಕ್ಕೆ ಸಮಯ ಹಿಡಿಯುತ್ತದೆ. ಇದೇ ರೀತಿ ತನಿಖೆ ಮಾಡಿ ಅಂತ ನಾವು ಹೇಳುವುದಕ್ಕೆ ಆಗಲ್ಲ. ಒತ್ತಡ ಹಾಕಿ ಈಗಲೇ ವರದಿ ಕೊಡಿ ಎಂದು ಹೇಳುವುದಕ್ಕೆ ಆಗಲ್ಲ. ಎಫ್ ಎಸ್ ಎಲ್ ವರದಿ ಕೂಡ ಬರಬೇಕು. ಎಲ್ಲವನ್ನೂ ಪರಿಶೀಲಿಸಿ ಎಸ್ ಐಟಿಯವರು ವರದಿ ಕೊಡುತ್ತಾರೆ ಎಂದು ತಿಳಿಸಿದರು.
ಸಿಎಂ ವಿಚಾರವಾಗಿ ನಮ್ಮಲ್ಲಿ ಗೊಂದಲಗಳಿಲ್ಲ. ನಾನೇ 5 ವರ್ಷ ಸಿಎಂ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಮಾತಾಡೋರು ಮಾತಾಡಿಕೊಳ್ತಾರೆ. ಸಿಎಂಗೆ ಜವಾಬ್ದಾರಿ ಇಲ್ವಾ ಎಂದು ಪರಮೇಶ್ವರ್ ಹೇಳಿದರು.
ಸಾಮಾಜಿಕ ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ವಿಸ್ತರಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್ ಅಧಿಕಾರಿಗಳ ಜತೆ ಚರ್ಚಿಸುತ್ತೇವೆ. ಈ ಬಗ್ಗೆ ಸಿಎಂ ನಿರ್ಧಾರ ಮಾಡುತ್ತಾರೆ ಎಂದರು.
Key words: Instructions, Dharmasthala case, report, Home Minister, Parameshwar