ಬೆಂಗಳೂರು,ಆಗಸ್ಟ್,1,2025 (www.justkannada.in) : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ತನಿಖೆ ನಡೆಯುವಾಗ ಮಾತನಾಡೋದು ಸರಿಯಲ್ಲ ವರದಿ ಕೊಡುವವರೆಗೂ ನಾನು ಮಾತನಾಡಲ್ಲ ಎಂದರು.
ಈ ಕುರಿತು ಮಾತನಾಡಿದ ಅವರು, ತನಿಖೆ ನಡೆಯುವಾಗ ಮಾತನಾಡೋದು ಸರಿಯಲ್ಲ. ತನಿಖೆ ಆಗಲಿ ಸಂಪೂರ್ಣ ರಿಪೋರ್ಟ್ ಕೊಡಲಿ. ಅಮೇಲೆ ಮಾತನಾಡುತ್ತೇನೆ ಎಂದರು.
ಪ್ರಣಬ್ ಮೋಹಂತಿ ಅವರಿಗೆ ಕೇಂದ್ರ ಸೇವೆಗೆ ಅವಕಾಶ ಸಿಕ್ಕಿದ್ದು ಖುಷಿ ಆದರೆ ಅವರು ಹೊರಗಡೆ ಹೋಗೋ ಪ್ರಶ್ನೆ ಬಂದಿಲ್ಲ ಧರ್ಮಸ್ಥಳ ವಿಚಾರದಲ್ಲಿ ತನಿಖೆ ಮಾಡುತ್ತಿದ್ದಾರೆ. ಮೊಹಂತಿಯನ್ನ ಕಳಿಸುವ ಪ್ರಕ್ರಿಯೆ ಆಗಿಲ್ಲ ಎಂದರು.
Key words: Dharmasthala, burial case, Home Minister, Parameshwar