ಬೆಂಗಳೂರು,ಜುಲೈ,21,2025 (www.justkannada.in): ಧರ್ಮಸ್ಥಳದಲ್ಲಿ ಶವಗಳನ್ನ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳಿಗೆ ತನಿಖೆ ಜವಾಬ್ದಾರಿ ನೀಡಿದ್ದೇವೆ. ತನಿಖೆಯ ನಂತರ ಸತ್ಯಾಂಶ ಹೊರಬರಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣದ ತನಿಖೆಯನ್ನ ಸರ್ಕಾರ ಎಸ್ ಐಟಿಗೆ ವಹಿಸಿದೆ. ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಹಲವಾರು ಜನ ಪ್ರಕರಣ ತನಿಖೆಗೆ ಒತ್ತಾಯಿಸಿದರು. ಹಲವು ಜನ ಕಂಪ್ಲೆಂಟ್ ಕೊಟ್ಟಿದ್ದಾರೆ. ತನಿಖೆ ಮಾಡಿದರೆ ನಿಜಾಂಶ ಹೊರ ಬರಲಿದೆ ಎಂದರು.
ತನಿಖೆ ಜವಾಬ್ದಾರಿ ಪ್ರಣವ್ ಮೊಹಂತಿಗೆ ವಹಿಸಿದ್ದೇವೆ. ಹಿರಿಯ ಅಧಿಕಾರಿಗಳು ತನಿಖೆ ಮಾಡಲಿದ್ದಾರೆ. ಜವಾಬ್ದಾರಿಯಿಂದ ತನಿಖೆ ಮಾಡುತ್ತೇವೆ ಎಂದು ಪ್ರಣವ್ ತಿಳಿಸಿದ್ದಾರೆ. ಪ್ರಕರಣ ತನಿಖೆಯಿಂದ ಯಾರೂ ಹಿಂದೆ ಸರಿಯುವ ಬಗ್ಗೆ ಏನು ಹೇಳಿಲ್ಲ. ನನಗೆ ಸರ್ಕಾರಕ್ಕೆ ತಿಳಿಸಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದರು.
Key words: Dharmasthala, burial, case, SIT, investigation, Home Minister, Parameshwar