ಬೆಂಗಳೂರು,ಡಿಸೆಂಬರ್,24,2025 (www.justkannada.in): ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ಏನು ಹೇಳುತ್ತೋ ಅದೇ ಫೈನಲ್ ಎಂದು ಗೃಹ ಸಚಿವ.ಡಾ.ಪರಮೇಶ್ವರ್ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ನಾಯಕತ್ವ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ಏನು ಹೇಳುತ್ತದೆಯೋ ಅದೇ ಅಂತಿಮವಾಗಿರುತ್ತದೆ. ಗೊಂದಲ ಆಗಬಾರದು ಅಂತಾ ಮಲ್ಲಿಕಾರ್ಜುನ ಖರ್ಗೆ ಆ ರೀತಿ ಹೇಳಿದ್ದಾರೆ ಎಂದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ನಡೆಸಲು ಅನುಮತಿ ನಿರಾಕರಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಕೆಎಸ್ ಸಿಎ ಅವರು ಶಿಫಾರಸು ಪಾಲಿಸಲಿಲ್ಲ. ಕೆಎಸ್ ಸಿಎ ಈವರೆಗೆ ಮುಂಜಾಗ್ರತೆ ತೆಗೆದುಕೊಂಡಂತೆ ಕಂಡು ಬಂದಿಲ್ಲ. ಹೀಗಾಗಿ ಅನುಮತಿ ನಿರಾಕರಣೆಯಾಗಿದೆ ಎಂದರು.
ರಾಹುಲ್ ಗಾಂಧಿಗೆ ಕೆ.ಎನ್ ರಾಜಣ್ಣ ಪತ್ರ ವಿಚಾರ, ಪತ್ರ ನನಗೆ ತೋರಿಸಿಲ್ಲ. ಪತ್ರ ನೋಡಿದ ಮೇಲೆ ಮಾತನಾಡುತ್ತೇನೆ ಎಂದು ಪರಮೇಶ್ವರ್ ತಿಳಿಸಿದರು.
Key words: High Command, final, Home Minister, Dr. Parameshwar







