ತಮ್ಮ ಆರೋಪಕ್ಕೆ ಹೆಚ್.ಡಿಕೆ ಬಳಿ ಯಾವುದಾದರೂ ದಾಖಲೆ ಇದ್ರೆ ಕೊಡಲಿ-ಗೃಹ ಸಚಿವ ಡಾ.ಜಿ.ಪರಮೇಶ್ವರ್.

ಬೆಂಗಳೂರು,ಜುಲೈ,4,2023(www.justkannada.in):  ಸಿಎಂ ಕಚೇರಿಯಲ್ಲಿ ಹಣಕ್ಕೆ ಡಿಮ್ಯಾಂಡ್ ಆರೋಪ ಮಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕಿಡಿಕಾರಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸರ್ಕಾರದ ವಿರುದ್ಧ ಹೆಚ್.ಡಿ ಕುಮಾರಸ್ವಾಮಿ ಆರೋಪ ಸರಿಯಲ್ಲ. ಹೆಚ್.ಡಿಕೆ ತಮ್ಮ ಆರೋಪಕ್ಕೆ ಯಾವುದಾದರೂ ದಾಖಲೆ ಇದ್ದರೆ ಕೊಡಲಿ ಸದನದಲ್ಲಿ ಚರ್ಚೆ ಮಾಡೋಣ ತನಿಖೆ ಸಹ ಮಾಡೋಣ ಎಂದರು.

ಕಾಂಗ್ರೆಸ್‍ ರಾಜ್ಯದ ಜನತೆಗೆ ಕೊಟ್ಟ ಭರವಸೆ ಈಡೇರಿಸುತ್ತಿದೆ. ಈಗಾಗಲೇ ಮಹಿಳೆಯರು ಶಕ್ತಿ ಯೋಜನೆ ಫಲ ಪಡೆಯುತ್ತಿದ್ದಾರೆ ಆದಷ್ಟು ಬೇಗ. ಉಳಿದ ಯೋಜನೆಗಳು ಅನುಷ್ಟಾನವಾಗಲಿದೆ ಇದು ಬಿಜೆಪಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಪರಮೇಶ್ವರ್ ವಾಗ್ದಾಳಿ ನಡೆಸಿದರು.

Key words: Home Minister -Dr. G. Parameshwar – HD Kumaraswamy- document – allegation.