ರಾಜ್ಯಾದ್ಯಂತ ಪಟಾಕಿ ನಿಷೇಧಕ್ಕೆ ಚಿಂತನೆ- ಗೃಹ ಸಚಿವ ಡಾ.ಜಿ.ಪರಮೇಶ್ವರ್.

ಬೆಂಗಳೂರು, ಅಕ್ಟೋಬರ್​​​​ 18,2023(www.justkannada.in):  ಅತ್ತಿಬೆಲೆ ಪಟಾಕಿ ದುರಂತ ಪ್ರಕರಣ ಸಂಬಂಧ ರಾಜ್ಯಾದ್ಯಂತ ಪಟಾಕಿ ನಿಷೇಧಕ್ಕೆ ಚಿಂತನೆ ಮಾಡಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್   ಹೇಳಿದರು.

ಅತ್ತಿಬೆಲೆ ಪಟಾಕಿ  ಗೋದಾಮು ಅಗ್ನಿ ದುರಂತ ನಡೆದ ಸ್ಥಳಕ್ಕೆ ಇಂದು ಗೃಹ ಇಲಾಖೆ ಸಚಿವ ಪರಮೇಶ್ವರ್​ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪರಮೇಶ್ವರ್,  ಬೆಂಗಳೂರಿನಲ್ಲಿ ಹೆಚ್ಚು ಜನ ವಾಸ ಹಿನ್ನೆಲೆ, ಜೊತೆಗೆ ಇತ್ತೀಚೆಗೆ ಪಟಾಕಿ ಅವಘಡಗಳಲ್ಲಿ ಅಮಾಯಕರು ಮೃತಪಟ್ಟಿದ್ದಾರೆ. ದೆಹಲಿ ಮಾದರಿಯಲ್ಲಿ ರಾಜ್ಯದಲ್ಲಿ ಪಟಾಕಿ ಬ್ಯಾನ್​ಗೆ ಚಿಂತನೆ ಮಾಡಲಾಗುವುದು. ಸಾಧಕ ಬಾಧಕ ಗಮನಿಸಿ ಕನಿಷ್ಠ ಬೆಂಗಳೂರಿನಲ್ಲಿ ಪಟಾಕಿ ಬ್ಯಾನ್ ಮಾಡಲು ಚಿಂತನೆ ಎಂದು ಹೇಳಿದರು.

ಅತ್ತಿಬೆಲೆ ಪಟಾಕಿ ದುರಂತದಲ್ಲಿ 17 ಮಂದಿ ಸಾವು ವಿಷಾದನೀಯ. ಪಟಾಕಿ ಮಳಿಗೆ ಮಾಲೀಕ 2017 ರಿಂದ 2022 ವರೆಗೆ ನೂತನ ಪರವಾನಗಿ ನವೀಕರಣ ನಡುವೆ ಫೇಕ್ ಲೈಸೆನ್ಸ್ ಸೃಷ್ಟಿ ಮಾಡಲಾಗಿದೆ. ಕೇವಲ 1 ಸಾವಿರ ಕೆಜಿ ಪಟಾಕಿ ಮಾರಾಟಕ್ಕೆ ಪರವಾನಗಿ ನೀಡಲಾಗಿದೆ. ಆದರೆ 50 ಟನ್​ಗೂ ಅಧಿಕ ಪಟಾಕಿ ಅಕ್ರಮವಾಗಿ ದಸ್ತಾನು ಮಾಡಲಾಗಿತ್ತು ಎಂದು ಪರಮೇಶ್ವರ್ ತಿಳಿಸಿದರು.

Key words: Home Minister- Dr. G. Parameshwar – banning- firecrackers- across -state.