ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ.

ಬೆಂಗಳೂರು,ಜುಲೈ,12,2022(www.justkannada.in): ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಆರೋಪಿಗಳಿಗೆ ರಾಜಾತಿಥ್ಯ ಆರೋಪ ಹಿನ್ನೆಲೆಯಲ್ಲಿ ಗೃಹಸಚಿವ ಅರಗ ಜ್ಞಾನೇಂದ್ರ  ಇಂದು ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ದಿಢೀರ್ ಭೇಟಿ  ನೀಡಿ ಪರಿಶೀಲನೆ  ನಡೆಸಿದರು.

ಹರ್ಷ ಕೊಲೆ ಮಾಡಿದ ಆರೋಪಿಗಳು ಜೈಲಿನಲ್ಲೇ ಮೊಬೈಲ್ ಬಳಕೆ ಹಿನ್ನೆಲೆ ವಸ್ತು ಸ್ಥಿತಿ‌ ಅರಿಯಲು ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ ಗೃಹಸಚಿವ ಅರಗ ಜ್ಞಾನೇಂದ್ರ, ಹರ್ಷ ಆರೋಪಿಗಳ ಬ್ಯಾರೆಕ್ ಕಡೆ ಪರಿಶೀಲನೆ ನಡೆಸಿದ್ದಾರೆ. ಭೇಟಿ ವೇಳೆ ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡರು ಎನ್ನಲಾಗಿದೆ.

ಭೇಟಿ ಬಳಿಕ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಮುರುಗನ್ ಕಮಿಟಿ ವರದಿ ಆಧಾರದ ಮೇಲೆ.  ಡಿಜಿಪಿ ಸಹಿತ 35 ಸಿಬ್ಬಂದಿಯನ್ನ ವರ್ಗಾವಣೆ ಮಾಡಲಾಗಿದೆ.  ಸೆಂಟ್ರಲ್ ಜೈಲಿನ 15 ಅಧಿಕಾರಿಗಳನ್ನ ವರ್ಗಾವಣೆ ಮಾಡಿದ್ದೇವೆ. ಮುರುಗನ್ ವರದಿಯಲ್ಲಿ ಹೆಸರಿದ್ದವರನ್ನ ವರ್ಗಾವಣೆ ಮಾಡಿದ್ದೇವೆ ಎಂದರು.

Key words: Home Minister -Araga jnanendra – visit – Bangalore -Central Jail