ಮಲೆನಾಡನ್ನ ಉಗ್ರರ ಅಡ್ಡವಾಗಲು ಬಿಡುವುದಿಲ್ಲ- ಗೃಹ ಸಚಿವ ಅರಗ ಜ್ಞಾನೇಂದ್ರ.

ಬೆಂಗಳೂರು,ಸೆಪ್ಟಂಬರ್,24,2022(www.justkannada.in): ಶಿವಮೊಗ್ಗದಲ್ಲಿ ಶಂಕಿತ ಉಗ್ರರ ಬಂಧನ ವಿಚಾರ ಸಂಬಂಧ ಮಲೆನಾಡನ್ನ ಉಗ್ರರ ಅಡ್ಡವಾಗಲು ಬಿಡುವುದಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅರಗ ಜ್ಞಾನೇಂದ್ರ, ಮತಾಂಧ ಶಕ್ತಿಗಳ ಸಂಪರ್ಕ ಪಡೆದು ಈ ರೀತಿ ಮಾಡಿದ್ದಾರೆ. ಈ ಬಗ್ಗೆ ಎನ್ ಐಎ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ.  ರಾಷ್ಟ್ರದ ಏಕತೆಗೆ ಭಂಗ ತರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಮಲೆನಾಡು ಉಗ್ರರ ಅಡ್ಡವಾಗಲು ಬಿಡಲ್ಲ.

ತನಿಖೆ ನಡೆಸಲು ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಿದ್ದೇವೆ.  ಕಾಂಗ್ರೆಸ್ ಪಕ್ಷದ ಅವಧಿಯಲ್ಲಿ ಈ ರೀತಿ ಕ್ರಮ ಆಗಿರಲಿಲ್ಲ. ಅಲ್ಪಸಂಖ್ಯಾತರು ಕಾಂಗ್ರೆಸ್  ಪಕ್ಷದ ವೋಟ್ ಬ್ಯಾಂಕ್  ಎಂದು ಅರಗ ಜ್ಞಾನೇಂದ್ರ ತಿಳಿಸಿದರು.

Key words: Home Minister-Araga jnanendra- suspected- terrorists – Shimoga.