ಹಿಂದಿ ದಿವಸ್ ಆಚರಣೆಗೆ ವಿರೋಧಿಸಿ ಬೆಂಗಳೂರು ಸೇರಿ ಹಲವೆಡೆ ಪ್ರತಿಭಟನೆ.

ಬೆಂಗಳೂರು,ಸೆಪ್ಟಂಬರ್,14,2021(www.justkammada.in):  ಇಂದು ಆಚರಿಸಲಾಗುತ್ತಿರುವ ಹಿಂದಿ ದಿವಸ್ ಆಚರಣೆಗೆ ಆಕ್ರೊಶ ವ್ಯಕ್ತಪಡಿಸಿ ಬೆಂಗಳೂರು ಸೇರಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯಿತು.

ಬೆಂಗಳೂರಿನಲ್ಲಿ ಜೆಡಿಎಸ್ ಕಾರ್ಯಕರ್ತರಿಂದ ಹಿಂದಿ ದಿವಸ್ ಆಚರಣೆ ವಿರೋಧಿಸಿ ಪ್ರತಿಭಟನೆ ನಡೆಸಿದರು. ನಗರದ ಜೆಪಿ ಭವನದ ಎದರು ಪ್ರತಿಭಟನೆ ನಡೆಸಿ  ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ವೇಳೆ ಪೊಲೀಸರ ಜತೆ ಧರಣಿನಿರತರು ವಾಗ್ವಾದ ನಡೆಸಿದರು.

ಹಿಂದಿ ದಿವಸ್ ಆಚರಣೆ ವಿರುದ್ಧ ಧಾರವಾಡ, ಹಾಸನ, ಬೆಳಗಾವಿ ಜಿಲ್ಲೆಗಳಲ್ಲೂ ಪ್ರತಿಭಟನೆ ನಡೆಯಿತು. ಕನ್ನಡಪರ ಸಂಘಟನೆಗಳು ಹಿಂದಿದಿವಸ್ ಗೆ ವಿರೋಧ ವ್ಯಕ್ತಪಡಿಸಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾವಿಯ ಸಾಹಿತ್ಯಭವನದ ಬಳಿ ಕನ್ನಡಪರ ಸಂಘಟನೆಗಳು ಧರಣಿ ನಡೆಸಿದರು.

Key words: hindi divas- protests – Bengaluru-kannada organization