ಹಿಜಾಬ್ ವಿವಾದ ಕಾಂಗ್ರೆಸ್ ಪಕ್ಷದ ಕೂಸು-  ಸಚಿವ ಆರ್.ಅಶೋಕ್ ಟೀಕೆ.

ಬೆಂಗಳೂರು,ಮಾರ್ಚ್,25,2022(www.justkannada.in):  ಹಿಜಾಬ್ ವಿವಾದ ಕಾಂಗ್ರೆಸ್ ಪಕ್ಷದ ಕೂಸು. ಹಿಜಾಬ್ ವಿವಾದ ಸೃಷ್ಠಿ ಮಾಡಿದ್ದೇ ಕಾಂಗ್ರೆಸ್ ನಾಯಕರು ಎಂದು ಕಂದಾಯ ಸಚಿವ ಆರ್.ಅಶೋಕ್ ಟೀಕಿಸಿದರು.

ಈ ಕುರಿತು ಇಂದು ಮಾತನಾಡಿದ ಸಚಿವ ಆರ್.ಅಶೋಕ್,  ಹಿಜಾಬ್ ವಿವಾದದ ಹಿಂದೆ ಕಾಂಗ್ರೆಸ್ ನಾಯಕರು ಇದ್ದಾರೆ. ವೋಟ್ ಬ್ಯಾಂಕ್ ಗೆ ಅಲ್ಪಸಂಖ್ಯಾತರನ್ನ ಬಳಸಿಕೊಳ್ಳುತ್ತಾರೆ. ಅಲ್ಪ ಸಂಖ್ಯಾತರಿಗೆ  ಏನು ಅನುಕೂಲ ಮಾಡಲ್ಲ.   ಶಾಲೆಗೆ ಯಾರೇ  ಬಂದರೂ ಹಿಜಾಬ್ ತೆಗೆದಿಟ್ಟು ಬರಬೇಕು ಎಂದು ಹೇಳಿದರು.

ಇನ್ನು ಸ್ವಾಮೀಜಿಗಳು ಸಹ ತಲೆಯ ಮೇಲೆ ಬಟ್ಟೆ ಹಾಕುತ್ತಾರೆ ಎಂಬ ಸಿದ್ಧರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ,  ಸಿದ್ಧರಾಮಯ್ಯ ಸ್ವಾಮೀಜಿಗಳ ಕ್ಷಮೆಯಾಚಿಸಬೇಕು. ಸಿದ್ದರಾಮಯ್ಯ ವೋಟ್ ಬ್ಯಾಂಕ್ ರಾಜಕಾರಣ ಮಾಡ್ತಾರೆ ಎಂದು ಕಿಡಿಕಾರಿದ್ದಾರೆ.

Key words: Hijab controversy – Congress – Minister -R. Ashok