ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹುಟ್ಟೂರಿನಲ್ಲಿ 111 ಅಡಿ ಎತ್ತರದ ಪ್ರತಿಮೆ ಸ್ಥಾಪನೆ – ಡಿಸಿಎಂ ಅಶ್ವಥ್ ನಾರಾಯಣ್…

ಬೆಂಗಳೂರು,ಜನವರಿ,21,2021(www.justkannada.in):  ಪರಮಪೂಜ್ಯ ಡಾ. ಶಿವಕುಮಾರ ಮಹಾಸ್ವಾಮೀಜಿ ಅವರ ಜನ್ಮಸ್ಥಳವಾದ ರಾಮನಗರ ಜಿಲ್ಲೆಯ ವೀರಾಪುರ ಗ್ರಾಮವನ್ನು ಜಾಗತಿಕ ಪ್ರವಾಸೋದ್ಯಮ ತಾಣವನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್, ಶ್ರೀಗಳ 111 ಅಡಿ ಎತ್ತರದ ಪ್ರತಿಮೆಯ ಸ್ಥಾಪನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ತುಮಕೂರಿನ ಸಿದ್ದಗಂಗಾ ಮಠದಲ್ಲಿ ಗುರುವಾರ ಶ್ರಿ ಶಿವಕುಮಾರ ಮಹಾಸ್ವಾಮೀಜಿ ಅವರ ಎರಡನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ  ಡಿಸಿಎಂ ಅಶ್ವಥ್ ನಾರಾಯಣ್, ಕೆಲ ತಾಂತ್ರಿಕ ಕಾರಣಗಳಿಂದ ಈ ಯೋಜನೆ ಕೊಂಚ ವಿಳಂಬವಾಗಿದೆ. ಈಗಾಗಲೇ ಸರಕಾರ 25 ಕೋಟಿ ರೂ. ಅನುದಾನ ಒದಗಿಸಿದೆ. ಆದಷ್ಟು ಬೇಗ ಯೋಜನೆಯ ಕೆಲಸವನ್ನು ಆರಂಭ ಮಾಡಲಾಗುವುದು ಎಂದರು.high statue - Sri Shivakumara Swamiji -DCM -Ashwath Narayan-tumakur

ಈ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ

ಶೈಕ್ಷಣಿಕ ಕ್ಷೇತ್ರದಲ್ಲಿ ಪೂಜ್ಯ ಸ್ವಾಮೀಜಿ ಅವರು ಮಾಡಿರುವ ಕೆಲಸವು ಅಜರಾಮರ. ಅವರ ಅನುಗ್ರಹ ಹಾಗೂ ಪ್ರೇರಣೆಯಿಂದ ಸರಕಾರ ಕೆಲಸ ಮಾಡುತ್ತಿದೆ. ಸ್ವಾಮೀಜಿ ಅವರ ತ್ರಿವಿಧ ದಾಸೋಹದಂತೆ ಅನ್ನ, ಅಕ್ಷರ ಹಾಗೂ ಆಶ್ರಯದ ಪರಿಕಲ್ಪನೆಯಂತೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು 2021-22ರಿಂದಲೇ ಜಾರಿ ಮಾಡಲು ಸರಕಾರ ನಿರ್ಧರಿಸಿದೆ. ಜತೆಗೆ, ಈ ನೀತಿಯಲ್ಲಿ ಸ್ವಾಮೀಜಿ ಅವರ ವಿಚಾರಗಳನ್ನು ಅಳವಡಿಸಿಕೊಳ್ಳುತ್ತೇವೆ ಹಾಗೂ ಅವರ ಆಶಯಗಳಿಗೆ ಪೂರಕವಾಗಿ ಕೆಲಸ ಮಾಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಹೇಳಿದರು.

ಎಲ್ಲ ಸಮುದಾಯಗಳ ಬಡ ಮಕ್ಕಳಿಗೆ ಶಿಕ್ಷಣವನ್ನು ಶ್ರೀ ಶಿವಕುಮಾರ ಸ್ವಾಮೀಜಿ ಅವರು ನೀಡಿದರು. ಸಿದ್ದಗಂಗಾ ಮಠವನ್ನು ಜಗದ್ವಿಖ್ಯಾತಗೊಳಿಸಿದರು. ಅವರು ಎಂದಿಗೂ ನಮಗೆ ಮತ್ತು ನಮ್ಮ ನಾಡಿಗೆ ಸ್ಫೂರ್ತಿ. ಅವರಿಗೆ ಗೌರವ ತರುವ ರೀತಿಯಲ್ಲಿ ನಾವು ಕಾರ್ಯ ನಿರ್ವಹಿಸಬೇಕು. ಅವರು ಸಾಕಿ ಸಲುಹಿದ ಅನೇಕರು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿ ಇದ್ದಾರೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ ತಿಳಿಸಿದರು.high statue - Sri Shivakumara Swamiji -DCM -Ashwath Narayan-tumakur

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ತುಮಕೂರು ಸಂಸದ ಜಿ.ಎಸ್.ಬಸವರಾಜು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾ.ರ್ಯಕ್ರಮಕ್ಕೂ ಮೊದಲು ಡಿಸಿಎಂ ಅವರು ಸಿಎಂ ಅವರ ಜತೆ ತೆರಳಿ ಶಿವಕುಮಾರ ಸ್ವಾಮೀಜಿಯ ಗದ್ದಿಗೆಗೆ ಪೂಜೆ ಸಲ್ಲಿಸಿದರು.

Key words: high statue – Sri Shivakumara Swamiji -DCM -Ashwath Narayan-tumakur