ಶಾಸಕ ನೆಹರು ಓಲೇಕಾರ್ ಗೆ ಹೈಕೋರ್ಟ್ ನಿಂದ ರಿಲೀಫ್: ಶಿಕ್ಷೆ ಅಮಾನತ್ತಿನಲ್ಲಿಟ್ಟು ಜಾಮೀನು ಮಂಜೂರು.

ಬೆಂಗಳೂರು, ಮಾರ್ಚ್, 3,2023(www.justkannada.in):  50 ಲಕ್ಷದ ಕಾಮಗಾರಿಗಳನ್ನು ಪುತ್ರರಿಗೇ ನೀಡಿದ ಪ್ರಕರಣಕ್ಕೆ  ಸಂಬಂಧಿಸಿದಂತೆ ಶಾಸಕ ನೆಹರು ಓಲೇಕಾರ್​ಗೆ ಹೈಕೋರ್ಟ್​  ರಿಲೀಫ್​  ನೀಡಿದೆ.  ಜನಪ್ರತಿನಿಧಿಗಳ ನ್ಯಾಯಾಲಯ ವಿಧಿಸಿದ್ಧ 2 ವರ್ಷ ಶಿಕ್ಷೆ ಅಮಾನತ್ತಿನಲ್ಲಿಟ್ಟು ಜಾಮೀನು ಮಂಜೂರು ಮಾಡಿದೆ.

ಕಾಂಕ್ರೀಟ್ ರಸ್ತೆ ಸೇರಿ ಕೆಲ ಕಾಮಗಾರಿ ನಡೆಸಿದ ಆರೋಪದಡಿ ಶಾಸಕ ನೆಹರು ಓಲೇಕಾರ್ ಪುತ್ರರಾದ ಮಂಜುನಾಥ್​ ಮತ್ತು ದೇವರಾಜ್ ಓಲೇಕಾರ್​ ವಿರುದ್ಧ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಶಿಕ್ಷೆ ವಿಧಿಸಿತ್ತು.  ಈ ಹಿನ್ನೆಲೆಯಲ್ಲಿ ಶಾಸಕ ನೆಹರು ಓಲೇಕಾರ್ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ 2 ವರ್ಷ ಶಿಕ್ಷೆ ಅಮಾನತ್ತಿನಲ್ಲಿಟ್ಟು ಜಾಮೀನು ಮಂಜೂರು ಮಾಡಿದೆ.

 50 ಲಕ್ಷ ರೂ. ಮೊತ್ತದ ಕಾಮಗಾರಿ ಪುತ್ರರಿಗೇ ನೀಡಿದ ಆರೋಪ ಹಾವೇರಿ ಬಿಜೆಪಿ ಶಾಸಕ ನೆಹರು ಓಲೆಕಾರ್‌  ವಿರುದ‍್ಧ ಕೇಳಿ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ರರಾದ ಮಂಜುನಾಥ್‌, ದೇವರಾಜ್‌ ಓಲೆಕಾರ್​ಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ 2 ವರ್ಷ ಜೈಲುಶಿಕ್ಷೆ ವಿಧಿಸಿತ್ತು. ಕಾಂಕ್ರೀಟ್ ರಸ್ತೆ ಸೇರಿದಂತೆ ಕೆಲ ಕಾಮಗಾರಿಯಲ್ಲಿ ಶಾಸಕ ಓಲೆಕಾರ್‌ ವಿರುದ್ಧ ಸ್ವಜನ ಪಕ್ಷಪಾತ ಆರೋಪಿಸಿತ್ತು.

Key words: High Court – MLA -Nehru Olekar-Sentence -suspended – bail -granted