ನಾಳೆ ನಡೆಯಬೇಕಿದ್ದ ಮೈಸೂರು ಮೇಯರ್ ಚುನಾವಣೆಗೆ ತಡೆ ನೀಡಿದ ಹೈಕೋರ್ಟ್.

ಮೈಸೂರು,ಜೂನ್,10,2021(www.justkannada.in):  ನಾಳೆ ನಡೆಯಬೇಕಿದ್ಧ ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಗೆ ಹೈಕೋರ್ಟ್ ತಡೆ ನೀಡಿದೆ.covids-death-case-increase-mysore-city-corporation-control-room

ಕೋವಿಡ್ ಸಂದರ್ಭದಲ್ಲಿ ಚುನಾವಣೆ ಬೇಡ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಮೈಸೂರಿನ ಪ್ರದೀಪ್ ಎಂಬುವರು ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನಾಳಿನ ಮೇಯರ್ ಚುನಾವಣೆಗೆ ತಡೆನೀಡಿರುವ ಹೈಕೋರ್ಟ್, ಜೂನ್ 21ರ‌ ನಂತರ ಪರಿಸ್ಥಿತಿ ಅವಲೋಕಿಸಿ ಕ್ರಮ ಕೈಗೊಳ್ಳಿ ಎಂದು ತಿಳಿಸಿದೆ.

ಮೇಯರ್ ಸ್ಥಾನದಲ್ಲಿದ್ದ ರುಕ್ಮಿಣಿ ಮಾದೇಗೌಡ ಸದಸ್ಯತ್ವ ರದ್ದಾಗಿತ್ತು. ಚುನಾವಣಾ ಆಯೋಗಕ್ಕೆ ಸರಿಯಾದ ಆಸ್ತಿ ವಿವರ ಸಲ್ಲಿಸದ್ದಕ್ಕೆ ಸದಸ್ಯತ್ವ ರದ್ದಾಗಿತ್ತು. ಈ ಹಿನ್ನೆಲೆಯಲ್ಲಿ ನಾಳೆ ಮೇಯರ್ ಚುನಾವಣೆ ನಡೆಯಬೇಕಿತ್ತು.

Key words:  High Court has –stay-Mysore- mayor-election