ಇಡಿ ವಿಚಾರಣೆಗೆ ಗ್ರೀನ್ ಸಿಗ್ನಲ್: ಮಾಜಿ ಸಚಿವ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್…

ಬೆಂಗಳೂರು,ಆ,29,2019(www.justkananda.in0:  ನವದೆಹಲಿ ನಿವಾಸದ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಸಮನ್ಸ್ ಪ್ರಶ್ನಿಸಿ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿದೆ.

ಈ ಮೂಲಕ ಇಡಿ ವಿಚಾರಣೆಗೆ  ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಇಡಿ ಸಮನ್ಸ್  ಪ್ರಶ್ನಿಸಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌, ಸಚಿನ್‌ ನಾರಾಯಣ್‌ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ನ್ಯಾ.ಅರವಿಂದ ಕುಮಾರ್‌ ಅವರಿದ್ದ ನ್ಯಾಯಪೀಠ ತೀರ್ಪು ನೀಡಿದೆ.

ಇನ್ನು ಇದೇ ವೇಳೆ ನ್ಯಾಯಾಪೀಠ ತನ್ನ ತೀರ್ಪು ನೀಡುವ ವೇಳೆಯಲ್ಲಿ 120 ಬಿ ಪ್ರತ್ಯೇಕ ಒಳಸಂಚು ಅಂತ ಪರಿಗಣಿಸಬಹುದು, ಅಧಿಸೂಚಿತ ಅಪರಾಧಗಳಲ್ಲದೇ ಇನ್ನಿತ್ತರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೂಡ ತನಿಖೆ ನಡೆಸಬಹುದು ಅಂತ ನ್ಯಾಯಾಪೀಠ ಅಭಿಪ್ರಾಯ ಪಟ್ಟಿದೆ.

Key words: High Court -dismissed – petition – former minister DK Sivakumar- ED