ಬೆಂಗಳೂರು ,ಸೆಪ್ಟಂಬರ್,18,2025 (www.justkannada.in): ರಾಜ್ಯದಲ್ಲಿ ಜಾತಿಗಣತಿ ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರ ಕ್ರಮವನ್ನ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ ಗೆ ಎರಡು ಪಿಐಎಲ್ ಸಲ್ಲಿಕೆಯಾಗಿವೆ.
ರಾಜ್ಯ ಸರ್ಕಾರವು ಜಾತಿಗಣತಿಗೆ ಹೊಸ ಉಪಜಾತಿಗಳ ಸೃಷ್ಟಿ ಮಾಡಿದೆ ಎಂದು ಅರೋಪಿಸಿ ರಾಜ್ಯ ಸರ್ಕಾರದ ಜಾತಿಗಣತಿ ರದ್ದುಪಡಿಸುವಂತೆ ಕೋರಿ ಹೈಕೋರ್ಟ್ ಗೆ ವಕೀಲ ಕೆ.ಎನ್.ಸುಬ್ಬಾರೆಡ್ಡಿ ಮತ್ತು ಎನ್ ಜಗದೀಶ್ ಮತ್ತಿತರರಿಂದ ಪಿಐಎಲ್ ಸಲ್ಲಿಕೆಯಾಗಿದೆ.
ರಾಜ್ಯ ಸರ್ಕಾರವು ಜಾತಿಗಣತಿಗೆ ಹೊಸ ಉಪಜಾತಿಗಳ ಸೃಷ್ಟಿ ಮಾಡಿದೆ, ಜಾತಿ ಉಪಜಾತಿಗಳ ನಡುವೆ ಸರ್ಕಾರ ಎತ್ತಿ ಕಟ್ಟುತ್ತಿದೆ. 15 ದಿನಗಳಲ್ಲಿ ರಾಜ್ಯ ಸರ್ಕಾರವು ತರಾತುರಿಯಲ್ಲಿ ಜಾತಿಗಣತಿ ನಡೆಸುತ್ತಿದೆ. ಅದರಲ್ಲೂ ದಸರಾ ರಜೆ ದಿನಗಳಲ್ಲಿ ಜಾತಿಗಣತಿ ನಡೆಸುತ್ತಿದೆ.
ಜನರು ಹಬ್ಬ, ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವಾಗ ಜಾತಿಗಣತಿ ನಡೆಸುವುದು ಸರಿಯಲ್ಲ. ಸರ್ಕಾರ 1500 ಉಪಜಾತಿಗೂ ಪ್ರತ್ಯೇಕ ಅಸ್ತಿತ್ವ ನೀಡುತ್ತಿದೆ. ಜಾತಿಗಣತಿ ನಡೆಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರವಿದೆ. ಹೀಗಾಗಿ ರಾಜ್ಯ ಸರ್ಕಾರದ ಜಾತಿಗಣತಿ ನಡೆಸುವ ನಿರ್ಧಾರವನ್ನ ರದ್ದುಪಡಿಸಬೇಕು ಎಂದು ಮನವಿ ಮಾಡಿದ್ದಾರೆ.
Key words: PIL, High Court, cancellation, caste census