Thursday, September 17, 2026

BDA Apartments

ಋತುಚಕ್ರ ರಜೆ: ತಡೆಯಾಜ್ಞೆ ಆದೇಶಕ್ಕೆ ಮಾರ್ಪಾಡು ಮಾಡಿದ ಹೈಕೋರ್ಟ್ BDA JK_Adv BDA Adv
Home Front Page ಋತುಚಕ್ರ ರಜೆ: ತಡೆಯಾಜ್ಞೆ ಆದೇಶಕ್ಕೆ ಮಾರ್ಪಾಡು ಮಾಡಿದ ಹೈಕೋರ್ಟ್

ಋತುಚಕ್ರ ರಜೆ: ತಡೆಯಾಜ್ಞೆ ಆದೇಶಕ್ಕೆ ಮಾರ್ಪಾಡು ಮಾಡಿದ ಹೈಕೋರ್ಟ್

ಬೆಂಗಳೂರು, ಡಿಸೆಂಬರ್, 09,2025 (www.justkannada.in): ಮಹಿಳಾ ಉದ್ಯೋಗಿಗಳಿಗೆ ತಿಂಗಳಿಗೆ ಒಂದು  ಕಡ್ಡಾಯ ಮುಟ್ಟಿನ ರಜೆಯನ್ನು  ನೀಡಲು ಸರ್ಕಾರದ  ಹೊರಡಿಸಿದ್ದ ಆದೇಶಕ್ಕೆ ಇಂದು ಬೆಳಿಗ್ಗೆ  ಹೈ ಕೋರ್ಟ್​ ತಡೆಯಾಜ್ಞೆ ನೀಡಿತ್ತು. ಇದೀಗ ತಡೆಯಾಜ್ಞೆ ಆದೇಶವನ್ನು ಹೈಕೋರ್ಟ್ ಮಾರ್ಪಾಡು ಮಾಡಿದೆ.

ಸರ್ಕಾರದ ಋತುಚಕ್ರ ರಜೆ ಆದೇಶದಿಂದ ಹೋಟೆಲ್ ​ಗಳಿಗೆ ಸಮಸ್ಯೆ ಎಂದು ಹೋಟೆಲ್ ಸಂಘ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ಹೈಕೋರ್ಟ್  ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಅಲ್ಲದೆ ತಡೆಯಾಜ್ಞೆ ತೆರವಿಗೆ ಅರ್ಜಿ ಸಲ್ಲಿಸಲು ಸರ್ಕಾರ ಸ್ವತಂತ್ರವೆಂದು ಹೈಕೋರ್ಟ್ ಏಕಸದಸ್ಯ ಪೀಠ ಅಭಿಪ್ರಾಯ ಪಟ್ಟಿತ್ತು.

ಋತುಚಕ್ರ ರಜೆ ತಡೆಯಾಜ್ಞೆ ಹಿನ್ನೆಲೆಯಲ್ಲಿ ಸರ್ಕಾರದ ಪರ ವಕೀಲರು ಮನವಿ ಸಲ್ಲಿಸಿದ ಕಾರಣ ತಡೆಯಾಜ್ಞೆ ಆದೇಶವನ್ನು ಹೈಕೋರ್ಟ್ ಮಾರ್ಪಾಡು ಮಾಡಿ ವಿಚಾರಣೆಯನ್ನ ನಾಳೆಗೆ ಮುಂದೂಡಿಕೆ ಮಾಡಿದೆ.  ಹೀಗಾಗಿ ಸದ್ಯಕ್ಕೆ ಋತುಚಕ್ರ ರಜೆಗೆ ತಡೆ ಇಲ್ಲ.

ರಾಜ್ಯ ಸರ್ಕಾರದ ವಾದ ಕೇಳದೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಋತುಚಕ್ರದ ರಜೆ ಆದೇಶಕ್ಕೆ ಮುನ್ನ ಸರ್ಕಾರ ಕಾನೂನು ಪಾಲಿಸಿದೆ. ಹೀಗಾಗಿ ಆದೇಶ ಮಾರ್ಪಡಿಸಲು ಅಡ್ವೊಕೇಟ್ ಜನರಲ್ ಮನವಿ  ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಸರ್ಕಾರದ ವಾದ ಆಲಿಸಿದ ಬಳಿಕವೇ ಅರ್ಜಿ ಬಗ್ಗೆ ಆದೇಶಿಸಲಾಗುವುದು ಎಂದು ಹೇಳಿರುವ ಹೈ ಕೋರ್ಟ್​ ಈಗ ತಡೆಯಾಜ್ಞೆ ಮಾರ್ಪಡಿಸಿ ನಾಳೆಗೆ ವಿಚಾರಣೆ ನಿಗದಿಪಡಿಸಿದೆ.  ಋತುಚಕ್ರ ರಜೆ ಬೆಂಬಲಿಸಿ ಕೋರ್ಟ್​ಗೆ 50ಕ್ಕೂ ಹೆಚ್ಚು ಮಹಿಳಾ ವಕೀಲರು ಹಾಜರಾಗಿದ್ದರು.

Key words: Menstrual leave, High Court, modifies, stay, order