ಡಿಜೆ ಬಳಕೆಗೆ ನಿಷೇಧ : ಪೊಲೀಸರ ಸುತ್ತೂಲೆ‌ ಪ್ರಶ್ನಿಸಿದ್ದ ರಿಟ್‌ ಅರ್ಜಿ ವಜಾಗೊಳಿಸಿದ ಹೈಕೋರ್ಟ್.!

The writ petition filed in the High Court challenging the circular issued by the Bangalore Police Commissioner banning the use of DJs (Digital Jockeys) and sound systems at public functions has been dismissed. The Joint Commissioner of Bengaluru West Division had issued a circular on August 14 banning the use of DJs at Gauri-Ganesh festival, Eid Milad procession and other public functions. Shankar of Chamarajpet, an office bearer of the ‘Karnataka Light Music and Cultural Artists’ Association’, had filed a writ petition challenging this circular. A division bench headed by Chief Justice Vibhu Bakhru heard the petition on Saturday.

ಬೆಂಗಳೂರು ಆ.೨೩,೨೦೨೫ :  ಸಾರ್ವಜನಿಕ ಸಮಾರಂಭದಲ್ಲಿ ಡಿಜೆ (ಡಿಜಿಟಲ್‌ ಜಾಕಿ) ಹಾಗೂ ಸೌಂಡ್ ಸಿಸ್ಟಮ್‌ ಬಳಕೆಗೆ ನಿಷೇಧ ಹೇರಿ ಬೆಂಗಳೂರು ಪೊಲೀಸ್‌ ಆಯುಕ್ತರು ಹೊರಡಿಸಿದ್ದ  ಸುತ್ತೋಲೆ ಪ್ರಶ್ನಿಸಿ  ಹೈಕೋರ್ಟ್‌ ಮೊರೆ ಹೋಗಿದ್ದ ರಿಟ್‌ ಅರ್ಜಿ ವಜಾ.

ಗೌರಿ–ಗಣೇಶ ಹಬ್ಬ, ಈದ್ ಮಿಲಾದ್‌ ಮೆರವಣಿಗೆ ಮತ್ತು ಇನ್ನಿತರೆ ಸಾರ್ವಜನಿಕ ಸಮಾರಂಭಗಳಲ್ಲಿ ಡಿಜೆ ಬಳಕೆಗೆ ನಿಷೇಧ ಹೇರಿ ಆ. 14 ರಂದು ಬೆಂಗಳೂರು ಪಶ್ಚಿಮ ವಿಭಾಗದ ಜಂಟಿ ಆಯುಕ್ತರು  ಸುತ್ತೋಲೆ ಹೊರಡಿಸಿದ್ದರು. ಈ ಸುತ್ತೊಲೆ ಪ್ರಶ್ನಿಸಿ, ‘ಕರ್ನಾಟಕ ಲಘು ಸಂಗೀತ ಮತ್ತು ಸಾಂಸ್ಕೃತಿಕ ಕಲಾವಿದರ ಸಂಘಟನೆ’ ಪದಾಧಿಕಾರಿ,  ಚಾಮರಾಜಪೇಟೆಯ ಶಂಕರ್‌ ರಿಟ್‌ ಅರ್ಜಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಶನಿವಾರ ಈ ಅರ್ಜಿ ವಿಚಾರಣೆ ನಡೆಸಿತು.

ಈ ವೇಳೆ, ‘ಸಾರ್ವಜನಿಕ ಕಾರ್ಯಕ್ರಮದಲ್ಲಿ ಸೌಂಡ್ ಸಿಸ್ಟಮ್ ಮತ್ತು ಡಿಜೆ ನಿರ್ಬಂಧಿಸಿ ಬೆಂಗಳೂರು ಪೊಲೀಸರು ಹೊರಡಿಸಿರುವ ಸುತ್ತೋಲೆಯಲ್ಲಿ ಯಾವುದೇ ಲೋಪಗಳಿಲ್ಲ’ ಎಂಬ ಅಭಿಪ್ರಾಯವನ್ನು ಕೋರ್ಟ್‌  ವ್ಯಕ್ತಪಡಿಸಿತು.

ವಸತಿ ಪ್ರದೇಶದಲ್ಲಿ ಶಬ್ದದ ಮಟ್ಟ ಹಗಲಿನ ವೇಳೆ 55 ಡೆಸಿಬಲ್ ಮತ್ತು ರಾತ್ರಿ ವೇಳೆ 45 ಡೆಸಿಬಲ್ ಮಟ್ಟಕ್ಕೆ ನಿರ್ಬಂಧಿಸಲಾಗಿದೆ. ಆದ್ದರಿಂದ, ಸಾರ್ವಜನಿಕ ಡಿಜೆ ಮತ್ತು ಸೌಂಡ್ ಸಿಸ್ಟಮ್‌ನ ಬಳಕೆ ಒಪ್ಪಲಾಗದು ಎಂದು ನ್ಯಾಯಪೀಠ ಹೇಳಿದೆ.

ರಿಟ್ ಅರ್ಜಿಯ ಆಕ್ಷೇಪ :

ಶಬ್ದ ಮಾಲಿನ್ಯದ ಕಾರಣದಿಂದ ಈ ರೀತಿ  ಕಾರ್ಯಾದೇಶ ಹೊರಡಿಸಿರುವುದು ಸಾಂವಿಧಾನಿಕವಾಗಿರುವ ನಮ್ಮ ಮೂಲಭೂತ ಹಕ್ಕಿನ ಉಲ್ಲಂಘನೆ. ಸೌಂಡ್ ಸಿಸ್ಟಮ್‌ ಉತ್ಪಾದನೆ ಮತ್ತು ಮಾರಾಟಕ್ಕೆ ಅವಕಾಶವಿದೆ. ಆದರೆ, ಬಳಕೆಗೆ ನಿರ್ಬಂಧ ವಿಧಿಸುವುದು ಎಷ್ಟು ಸಮಂಜಸ ಎಂದು ಅರ್ಜಿದಾರರು ಸುತ್ತೋಲೆಯನ್ನು ಆಕ್ಷೇಪಿಸಿದ್ದರು.

key words: Ban on the use of DJs, High Court, dismisses writ petition, challenging police circular

vtu

SUMMARY:

Ban on the use of DJs: High Court dismisses writ petition challenging police circular!

The writ petition filed in the High Court challenging the circular issued by the Bangalore Police Commissioner banning the use of DJs (Digital Jockeys) and sound systems at public functions has been dismissed.

The Joint Commissioner of Bengaluru West Division had issued a circular on August 14 banning the use of DJs at Gauri-Ganesh festival, Eid Milad procession and other public functions. Shankar of Chamarajpet, an office bearer of the ‘Karnataka Light Music and Cultural Artists’ Association’, had filed a writ petition challenging this circular. A division bench headed by Chief Justice Vibhu Bakhru heard the petition on Saturday.