ಬೆಸ್ಕಾಂ ಸ್ಮಾರ್ಟ್ ಮೀಟರ್ ಕಡ್ಡಾಯ ಪ್ರಶ್ನಿಸಿದ್ದ ರಿಟ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು, ಆಗಸ್ಟ್ ,13,2025 (www.justkannada.in): ಬೆಸ್ಕಾಂ ಸ್ಮಾರ್ಟ್ ಮೀಟರ್ ಕಡ್ಡಾಯ ಪ್ರಶ್ನಿಸಿದ್ದ ರಿಟ್ ಅರ್ಜಿಯನ್ನ ಕರ್ನಾಟಕ ಹೈಕೋರ್ಟ್  ವಜಾಗೊಳಿಸಿದೆ.

ಬೆಸ್ಕಾಂ ಸ್ಮಾರ್ಟ್ ಮೀಟರ್ ಕಡ್ಡಾಯ ಪ್ರಶ್ನಿಸಿದ್ದ ರಿಟ್ ಅರ್ಜಿಯನ್ನು ಹಲವು ದಿನಗಳಿಂದ ವಿಚಾರಣೆ ನಡೆಸಿದ್ದ ಹೈಕೋರ್ಟ್, ಅಂತಿಮವಾಗಿ ವಾದ ಪ್ರತಿವಾದ ಆಲಿಸಿತ್ತು. ಇದೀಗ ಹಳೆಯ ಮೀಟರ್ ಬದಲಿಸುವುದಿಲ್ಲವೆಂದು ಎಜಿ ಹೇಳಿಕೆ ನೀಡಿದ್ದಾರೆ. ಅಲ್ಲದೇ ವಿಭಾಗೀಯ ಪೀಠದಲ್ಲಿ ಈ ವಿಚಾರಕ್ಕೆ ಪಿಐಎಲ್ ದಾಖಲಾಗಿದೆ ಎಂದು ಹೇಳಿ ಜಯಲಕ್ಷ್ಮಿ, ಪಿ.ಎಂ.ಹರೀಶ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ದೊಡ್ಡಬಳ್ಳಾಪುರದ ಟಿ.ಬಿ ನಾರಾಯಣಪ್ಪ ಲೇಔಟ್​ ನಿವಾಸ ಎಂ ಜಯಲಕ್ಷ್ಮೀ ಅವರು ಹೊಸದಾಗಿ ನಿರ್ಮಿಸಿರುವ ತಮ್ಮ ಮನೆಗೆ ಸಿಂಗಲ್ ಫೇಸ್​ ನಿಂದ ತ್ರೀ ಫೇಸ್​ ಗೆ ಮೀಟರ್ ಪರಿವರ್ತನೆ ಮಾಡಿಕೊಳ್ಳುವುದಕ್ಕೆ ಮನವಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ಬೆಸ್ಕಾಂ ಅಧಿಕಾರಿಗಳು, ಸ್ಮಾರ್ಟ್​ ಮೀರ್ಟ್ ಅವಳವಸಿಕೊಳ್ಳಬೇಕು ಎಂದು ತಾಕೀತು ಮಾಡಿ ಪತ್ರವೊಂದನ್ನು ನೀಡಿದ್ದರು.

ಈ ಕುರಿತು ದೊಡ್ಡಬಳ್ಳಾಪುರ ನಗರ ಉಪವಿಭಾಗ ಸಹಾಯ ಕಾರ್ಯನಿರ್ವಾಹಕ ಇಂಜಿನಿಯರ್ ನೀಡಿದ್ದ ಪತ್ರವನ್ನು ಪ್ರಶ್ನಿಸಿ ವಿಯಲಕ್ಷ್ಮೀ ಹೈಕೋರ್ಟ್​​ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಇದನ್ನು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಸ್ಮಾರ್ಟ್ ಮೀಟರ್ ಬಗ್ಗೆ ಸರ್ಕಾರಕ್ಕೆ ಚಾಟಿ ಬೀಸಿದ್ದರು.

Key words: High Court, dismisses , writ petition,s mart meter, mandate