1275 ಪಾರಂಪರಿಕ ಕಟ್ಟಡಗಳನ್ನ ಪ್ರವಾಸಿ ತಾಣಗಳಾಗಿ ಗುರ್ತಿಸಿ ಘೋಷಿಸಿದ ಸರ್ಕಾರ

ಬೆಂಗಳೂರು,ಸೆಪ್ಟಂಬರ್, 15,2025 (www.justkannada.in): ಕರ್ನಾಟಕ ಪ್ರವಾಸೋದ್ಯಮ ನೀತಿ 2024-29ರಡಿ ರಾಜ್ಯದ 1275 ಪಾರಂಪರಿಕ ಕಟ್ಟಡಗಳನ್ನ ಪ್ರವಾಸಿ ತಾಣಗಳೆಂದು ಗುರುತಿಸಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ.

ಈ ಕುರಿತು ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮುಹಮ್ಮದ್ ಇಬ್ರಾಹಿಂ ಆದೇಶ ಹೊರಡಿಸಿದ್ದು, ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ ಒಟ್ಟು 1275 ಪ್ರವಾಸಿ ತಾಣಗಳನ್ನು ಗುರುತಿಸಿ ಸರ್ಕಾರದ ಅನುಮೋದನೆ ನೀಡಿ ಆದೇಶಿಸಿದೆ.

ಸದರಿ ಸ್ಥಳಗಳಲ್ಲಿನ ಅಭಿವೃದ್ಧಿ ಕಾಮಗಾರಿಗಳ ಸಂಬಂಧ ಅನುದಾನ ಲಭ್ಯತೆಯನುಸಾರ ವಿವರವಾದ ಕ್ರಿಯಾಯೋಜನೆಯನ್ನು ರೂಪಿಸಿಕೊಂಡು, ಅಂದಾಜು ಪಟ್ಟಿ/ನಕ್ಷೆಗಳನ್ನು ಸಿದ್ಧಪಡಿಸಿ ತಾಂತ್ರಿಕ ಪರಿಶೀಲನೆಗೊಳಪಡಿಸಿ ಟೆಂಡರ್‌ಗೆ ಸಕ್ಷಮ ಪ್ರಾಧಿಕಾರದ ಅನುಮೋದನೆಯನ್ನು ಕಡ್ಡಾಯವಾಗಿ ಪಡೆಯುವಂತೆ ಸೂಚಿಸಲಾಗಿದೆ.

ಮೈಸೂರು ತಾಣಗಳ ಪಟ್ಟಿ ಹೀಗಿದೆ..

ಪ್ರವಾಸಿ ತಾಣಗಳೆಂದು ಘೋಷಿಸಿರುವ ಪಟ್ಟಿಯಲ್ಲಿ ಮೈಸೂರಿನ 13 ಪಾರಂಪರಿಕ ಕಟ್ಟಡಗಳನ್ನ  ಪ್ರವಾಸಿ ತಾಣಗಳೆಂದು ಗುರುತಿಸಿ ಅನುಮೋದನೆ ನೀಡಲಾಗಿದೆ. ಮೈಸೂರಿನ ಶುಕವನ, ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ ಅವಧೂತ ದತ್ತ ಪೀಠ, ರೈಲು ಸಂಗ್ರಹಾಲಯ, ಆರ್ ಕೆ ನಾರಾಯಣ್ ಅವರ ಮನೆ, ಸೆಂಟ್ ಜೋಸೆಫ್ ಕ್ಯಾಥೆಡ್ರಲ್ ( ಸೆಂಟ್ ಫಿಲೋಮಿನಾ ಶ್ರೈನ್),  ಓರಿಯಂಟಲ್ ರಿಸರ್ಚ್ ಇನ್ಸ್ ಟಿಟ್ಯೂಟ್, ಮೈಸೂರು ಸಿಲ್ಕ್ ವೇವಿಂಗ್ ಕಾರ್ಖಾನೆ,  ಶ್ರೀ ಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮನವರ ದೇವಾಲಯ, ಪಿರಿಯಾಪಟ್ಟಣದಲ್ಲಿರುವ ಶ್ರೀ ಶಿಡ್ಲುಮಲ್ಲಿಕಾರ್ಜುನಸ್ವಾಮಿ ದೇವಾಲಯ, ಟೀ.ನರಸೀಪುರದಲ್ಲಿನ ಮಹಾಲಕ್ಷ್ಮೀ ಸಮೇತ ಗುಂಜಾನರಸಿಂಹಸ್ವಾಮಿ ದೇವಸ್ಥಾನ, ಕೆಆರ್ ನಗರದ ಶ್ರೀ ಅರ್ಕೇಶ್ವರಸ್ವಾಮಿ ದೇವಸ್ಥಾನ, ಸರಗೂರಿನ ಬೇಲದಕುಪ್ಪೆ ಶ್ರೀ ಮಹದೇಶ್ವರಸ್ವಾಮಿ ದೇವಸ್ಥಾನ, ಹೆಚ್ ಡಿ ಕೋಟೆಯ ಭೀಮನಕೊಲ್ಲಿ ಶ್ರೀ ಮಹದೇಶ್ವರಸ್ವಾಮಿ , ನಂಜನಗೂಡಿನ ಶ್ರೀಮಠ ಶ್ರೀ ಸುತ್ತೂರು ಕ್ಷೇತ್ರಗಳು ಸರ್ಕಾರ ಗುರುತಿಸಿರುವ ಪ್ರವಾಸಿ ತಾಣಗಳ ಪಟ್ಟಿಯಲ್ಲಿವೆ.

Key words: Government, 1275 heritage,  buildings,  tourist destinations