ಉತ್ತರ ಕರ್ನಾಟಕದ ನೆರೆ ಸಂತ್ರಸ್ಥರಿಗೆ ನೆರವಾಗಿ: ಸ್ಯಾಂಡಲ್’ವುಡ್ ನಟರ ಮನವಿ

ಬೆಂಗಳೂರು, ಆಗಸ್ಟ್ 08, 2019 (www.justkannada.in): ನೆರೆಹಾವಳಿಯಿಂದ ಸಂಕಷ್ಟದಲ್ಲಿ ಸಿಲುಕಿರುವ ಉತ್ತರ ಕರ್ನಾಟಕದ ಜನರ ರಕ್ಷಣೆಗೆ ಕಿಚ್ಚ ಸುದೀಪ್ ಧಾವಿಸಿದ್ದಾರೆ.

ಸಂಕಷ್ಟದಲ್ಲಿ ಸಿಲುಕಿರುವ ಜನರ ರಕ್ಷಣೆಗೆ ತಕ್ಷಣ ಬರುವಂತೆ ಕಿಚ್ಚ ಅಭಿಮಾನಿಗಳಿಗೆ ಮತ್ತು ಸ್ನೇಹಿತರಿಕೆ ವಿನಂತಿ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಸುದೀಪ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಸುದೀಪ್ ಮಾತಿನಂತೆ ಅಭಿಮಾನಿಗಳು ಉತ್ತರ ಕರ್ನಾಟಕ ನೆರವಿಗೆ ದಾವಿಸುತ್ತಿದ್ದಾರೆ. ಅಲ್ಲದೆ ಸಾಕಷ್ಟು ಜನ ನಿಮ್ಮ ಜೊತೆ ಕೈಜೋಡಿಸುವುದಾಗಿ ಹೇಳಿದ್ದಾರೆ.

ಸುದೀಪ್ ಮಾತ್ರವಲ್ಲದೇ ದರ್ಶನ್, ಶಿವಣ್ಣ ಸೇರಿದಂತೆ ಸ್ಯಾಂಡಲ್ ವುಡ್ ನಟರು ಉತ್ತರ ಕರ್ನಾಟಕದ ಜನರಿಗೆ ನೆರವಾಗುವಂತೆ ಕೋರಿದ್ದಾರೆ.