ಮೈಸೂರು, ಡಿ.೨೬,೨೦೨೫: ಅರಮನೆ ಮುಂಭಾಗ ಜಯಮರ್ತಾಂಡ ದ್ವಾರದ ಬಳಿ ನಡೆದ ಗ್ಯಾಸ್ ಬಲೂನ್ ಸಿಲಿಂಡರ್ ಸ್ಫೋಟ ಘಟನೆ ಕಾನೂನು ಸುವ್ಯವಸ್ಥೆ ವೈಫಲ್ಯವಲ್ಲ, ಇದು ಒಂದು ಆಕಸ್ಮಿಕ ಅಪಘಾತ. ಈ ವಿಚಾರದಲ್ಲಿ ರಾಜಕೀಯ ಮಾಡಲ್ಲ ಎಂದು ಸಂಸದ ಯದುವೀರ್ ಹೇಳಿಕೆ.
ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಗಾಯಗೊಂಡು ಕೆ ಆರ್ ಆಸ್ಪತ್ರೆಗೆ ದಾಖಲಾಗಿರುವ ಗಾಯಾಳುಗಳ ಆರೋಗ್ಯ ವಿಚಾರಿಸಲು ಸಂಸದ ಯದುವೀರ್ ಇಂದು ಸಂಜೆ ಆಸ್ಪತ್ರೆಗೆ ಬೇಟಿ ನೀಡಿದ್ದರು. ಈ ವೇಳೆ ಶಾಸಕ ಶ್ರೀವತ್ಸ ಜತೆಗಿದ್ದರು. ಈ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಸಂಸದ ಯದುವೀರ್ ಹೇಳಿದಿಷ್ಟು..

ಈ ಘಟನೆ ಕಾನೂನು ಸುವ್ಯವಸ್ಥೆ ವಿಫಲ ಅಲ್ಲ ಇದು ಒಂದು ಅಪಘಾತ. ಘಟನೆಯಲ್ಲಿ ಇಬ್ಬರು ಮೃತರಾಗಿದ್ದಾರೆ. ಮೃತರ ಕುಟುಂಬಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪರಿಹಾರ ನೀಡವ ಅವಕಾಶವಿದೆ. ಈ ವಿಚಾರದಲ್ಲಿ ನಾನು ರಾಜಕೀಯ ಮಾಡುವುದಿಲ್ಲ.

ಅಸಂಘಟಿತ ವ್ಯಾಪಾರಿಗಳಿಗೆ ಒಂದು ಪ್ರತ್ಯೇಕ ಜೋನ್ ಅವಕಾಶಕ್ಕೆ ಪಾಲಿಕೆ ಅಧಿಕಾರಿಗಳ ಜತೆ ಈ ಹಿಂದೆಯೇ ಚರ್ಚಿಸಿರುವೆ. ಆದರೆ ಪಾಲಿಕೆ ಆಯುಕ್ತರು ಈತನಕ ಏನು ಕ್ರಮ ತೆಗೆದುಕೊಂಡಿಲ್ಲ. ಈ ಬಗ್ಗೆ ಮತ್ತೆ ಆಯುಕ್ತರನ್ನು ಪ್ರಶ್ನಿಸುತ್ತೇನೆ. ಅಧಿಕಾರಿಗಳು ಅಸಂಘಟಿತ ವ್ಯಾಪಾರಸ್ಥರನ್ನು ಗುರ್ತಿಸಬೇಕಾಗಿದೆ.
ಈ ಘಟನೆ ಆಕಸ್ಮಿಕವೂ ಅಥವಾ ಉದ್ದೇಶಪೂರಿತವೂ ವರದಿ ನಂತರ ಗೊತ್ತಾಗಲಿದೆ. ಈ ಘಟನೆಗಳಿಂದ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬೀಳಲಿದೆ. ಹಂಪಿಯಲ್ಲೂ ಒಂದು ಕೊಲೆ ಘಟನೆ ಜರುಗಿದ ಹಿನ್ನೆಲೆ ಶೇ. 80% ಪ್ರವಾಸೋದ್ಯಮದಲ್ಲಿ ಇಳಿಕೆಯಾಗಿದೆ. ಈ ಹಿನ್ನೆಲೆ ಒಂದು ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ. ಜತೆಗೆ ಪ್ರವಾಸಿ ಕ್ಷೇತ್ರಗಳಿಗೆ ಸರ್ಕಾರ ಹೆಚ್ಚಿನ ಭದ್ರತೆ ನೀಡಬೇಕು ಎಂದ ಸಂಸದ ಯದುವೀರ್ ಒತ್ತಾಯಿಸಿದರು.
key words: Helium Cylinder explosion, near palace, accidental incident, MP Yaduveer, Mysore

SUMMARY.
Cylinder explosion near palace was an accidental incident, I am not going to politicize the incident; MP Yaduveer
The gas balloon cylinder explosion incident near the Jayamarthanda gate in front of the palace is not a failure of law and order, it is an accidental accident. MP Yaduveer said that there will be no politics in this matter.

MP Yaduveer visited the hospital this evening to inquire about the health of the injured who were admitted to KR Hospital after being injured in the helium gas cylinder explosion. He was accompanied by MLA Srivatsa. Speaking to the media on this occasion, MP Yaduveer said this.






