ರಾಜ್ಯದಲ್ಲಿ ಐದು ದಿನಗಳ ಕಾಲ ಭಾರಿ ಮಳೆ…

ಬೆಂಗಳೂರು,ಜು,15,2020(www.justkannada.in): ರಾಜ್ಯದಲ್ಲಿ ಕೊರೋನಾ ಆರ್ಭಟದ ಜತೆಗೆ ಮಳೆಯ ಆರ್ಭಟವೂ ಜೋರಾಗಲಿದೆ. ಹೌದು, ರಾಜ್ಯದಲ್ಲಿ 5 ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.jk-logo-justkannada-logo

ರಾಜ್ಯದಲ್ಲಿ ಮುಂಗಾರು ಆರ್ಭಟ ಹಿನ್ನೆಲೆ, ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗಲಿದೆ. ಹಾಸನ, ಕೊಡಗು ಭಾಗಗಳಲ್ಲಿ ವ್ಯಾಪಾಕವಾಗಿ ಉತ್ತಮ ಮಳೆಯಾಗಲಿದ್ದು, ಹಾಸನ ಹಾಗೂ ಕೊಡಗಿನ ಕೆಲ ಭಾಗಗಳಲ್ಲಿ  ವರುಣನ ಅಬ್ಬರ ಜೋರಾಗುವ ಸಾಧ್ಯತೆ  ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. Heavy rain - state - five days.

Key words: Heavy rain – state – five days.