ಬೆಳಗಾವಿಯಲ್ಲಿ ಮಹಾಮಳೆಗೆ ಮತ್ತೊಂದು ಬಲಿ…

ಬೆಳಗಾವಿ,ಆ,8,2019(www.justkannada.in): ಬಿಟ್ಟು ಬಿಡದೆ ಸುರಿಯುತ್ತಿರುವ ಮಹಾಮಳೆಗೆ ಬೆಳಗಾವಿಯಲ್ಲಿ ಮತ್ತೊಂದು ಬಲಿಯಾಗಿದೆ.

ಭಾರಿ ಮಳೆಯಿಂದಾಗಿ  ಹಳ್ಳದಾಟುವ ವೇಳೆ ಬಾಲಕಿಯೊಬ್ಬಳು ಕೊಚ್ಚಿಹೋಗಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ  ನಾಗರಮುನ್ನೋಳಿ ಗ್ರಾಮದ ಬಳಿ ನಡೆದಿದೆ.  ಶಿಲ್ಪಾ ಸಿದ್ದಪ್ಪ ಮನಗೊಳಿ ನೀರಿನಲ್ಲಿ ಕೊಚ್ಚಿ ಹೋಗಿರುವ ಬಾಲಕಿ. ಬಾಲಕಿ ಹಳ್ಳದಾಟುವ ವೇಳೆ ಈ ಘಟನೆ ನಡೆದಿದೆ. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇನ್ನೊಂದೆಡೆ  ಧಾರವಾಡ ಜಿಲ್ಲೆ ಮುರುಕನಹಟ್ಟಿ ಬಳಿ  ಬೆಡ್ತಿಹಳ್ಳದಲ್ಲಿ ಕೊಚ್ಚಿಹೋಗಿದ್ದ ಚಾಲಕ  ಸಹ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಚಾಲಕನ ಗುರುತು ಇನ್ನು ಪತ್ತೆಯಾಗಿಲ್ಲ. ರಾಜ್ಯದಲ್ಲಿ ಸುರಿಯುತ್ತಿರುವ ಮಹಾಮಳೆಗೆ ಜನಜೀವನ ಅಸ್ಯವ್ಯಸ್ತವಾಗಿದ್ದು ಹಲವು ಜಿಲ್ಲೆಗಳು ಅಕ್ಷರಶಃ ಪ್ರವಾಹದಲ್ಲಿ ನಲುಗಿವೆ.

Key words: Heavy rain-belagavi- girl-death