ಪಾಕಿಸ್ತಾನದ ರಾವಲ್ಪಿಂಡಿ ಜಿಲ್ಲೆಯಲ್ಲಿ ಭಾರಿ ಹಿಮವರ್ಷ: 21 ಪ್ರವಾಸಿಗರು ಸಾವು

ಬೆಂಗಳೂರು, ಜನವರಿ 09, 2021 (www.justkannada.in): ಪಾಕಿಸ್ತಾನದ ರಾವಲ್ಪಿಂಡಿ ಜಿಲ್ಲೆಯ ಮುರ್ರೀಯಲ್ಲಿ ಶನಿವಾರ ಭಾರೀ ಪ್ರಮಾಣದ ಹಿಮವರ್ಷ ವಾಗಿದೆ.

ರಸ್ತೆಗಳೆಲ್ಲವೂ ಹಿಮಾವೃತವಾಗಿದ್ದು, 9 ಮಕ್ಕಳು ಸೇರಿ ಒಟ್ಟು 21 ಪ್ರವಾಸಿಗರು ಕಾರಿನೊಳಗೇ ಸಾವನ್ನಪ್ಪಿದ್ದಾರೆ.

ರಾವಲ್ಪಿಂಡಿ ಜಿಲ್ಲೆಗೆ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಹಿಮವರ್ಷ ದ ವೇಳೆ ಒಟ್ಟು 24 ಸಾವಿರ ವಾಹನಗಳು ಮುರ್ರೀ ನಗರದಲ್ಲಿದ್ದು, ಅದರಲ್ಲಿ 23 ಸಾವಿರ ವಾಹನಗಳನ್ನು ವಾಪಸು ಕಳುಹಿಸಲಾಗಿದೆ.

1000 ವಾಹನಗಳು ಹಿಮಾವೃತ ರಸ್ತೆಗಳಲ್ಲಿ ಸಿಲುಕಿರುವುದಾಗಿ ವರದಿಯಾಗಿದೆ. ಪೂರ್ತಿ ಮುರ್ರೀ ನಗರವನ್ನು ವಿಪತ್ತು ಪೀಡಿತ ಪ್ರದೇಶ ಎಂದು ಪಾಕ್‌ನ ಪಂಜಾಬ್‌ ಪ್ರಾಂತ್ಯದ ಸರ್ಕಾರ ಘೋಷಿಸಿದೆ.