ನೇಪಾಳದಲ್ಲಿ ಭಾರಿ ಭೂ ಕುಸಿತ: 18 ಮಂದಿ ಸಾವು

0
226

ನೇಪಾಳ, ಆಗಸ್ಟ್ 16, 2020 (www.justkannada.in): ಭಾರಿ ಮಳೆಯಿಂದಾಗಿ ನೇಪಾಳದಲ್ಲಿ ಭಾರಿ ಭೂ ಕುಸಿತ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಟ 18 ಮಂದಿ ಸಾವನ್ನಪ್ಪಿ 21 ಮಂದಿ ನಾಪತ್ತೆಯಾಗಿದೆ.

ಮಧ್ಯ ನೇಪಾಳದ ಸಿಂಧೂಪಾಲ್ ಚೌಕ್ ಜಿಲ್ಲೆಯ ಜುಗಾಲ್ ಗ್ರಾಮದಲ್ಲಿ ಭೂಕುಸಿತ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಠ 18 ಮಂದಿ ಸಾವನ್ನಪ್ಪಿ, 21 ಮಂದಿ ನಾಪತ್ತೆಯಾಗಿದ್ದಾರೆ.

170 ಮನೆಗಳ ಪೈಕಿ 37 ಮನೆಗಳು ಭೂಕುಸಿತದಲ್ಲಿ ನಾಶವಾಗಿವೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಗುಡ್ಡದ ಅಡಿಯಲ್ಲಿದ್ದ 25 ಮನೆಗಳು ನಾಮಾವಶೇಷವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.