ತಾಂತ್ರಿಕ ಕಾರಣದಿಂದಷ್ಟೇ ಖಾತೆ ಬದಲಾವಣೆ: ನಮ್ಮಿಬ್ಬರಲ್ಲಿ ಯಾವುದೇ ಅಸಮಾಧಾನ ಇಲ್ಲ -ಸಚಿವ ಸುಧಾಕರ್ ಸ್ಪಷ್ಟನೆ…

ಮೈಸೂರು,ಅಕ್ಟೋಬರ್,12,2020(www.justkannada.in): ಖಾತೆ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಾ.ಕೆ ಸುಧಾಕರ್.  ಒಂದು ವಾರದ ಹಿಂದೆಯೇ ಸಿಎಂ ಇಬ್ಬರನ್ನೂ ಕರೆದು ಮಾತನಾಡಿದ್ದಾರೆ. ಅವರು ಬಯಸಿದಂತೆ ಸಮಾಜ ಕಲ್ಯಾಣ ಇಲಾಖೆ ನೀಡಲಾಗಿದೆ. ತಾಂತ್ರಿಕ ಕಾರಣದಿಂದಷ್ಟೇ ಖಾತೆ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದರು.jk-logo-justkannada-logo

ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಡಾ.ಸುಧಾಕರ್, ಇಲ್ಲಿ ಮೂಲ, ವಲಸಿಗ ಎಂಬ ಪ್ರಶ್ನೆಯೇ ಇಲ್ಲ. ಪಕ್ಷದ ಆಶಯಗಳನ್ನ ಒಪ್ಪಿ ಬಂದ ಮೇಲೆ ಎಲ್ಲರೂ ಬಿಜೆಪಿಗರೇ. ಇದರಿಂದ ಯಾವುದೇ ಗೊಂದಲ ಬೇಡ. ನಾನು ಶ್ರೀರಾಮುಲು ಒಳ್ಳೆಯ ಸ್ನೇಹಿತರು. ನಮ್ಮಿಬ್ಬರಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದು ಪುನರುಚ್ಚಾರಿಸಿದರು.

ಕೋವಿಡ್ ನಿಯಂತ್ರಣ ಕುರಿತು ಇಂದು ಎರಡು ಪ್ರತ್ಯೇಕ ಸಭೆ ಮಾಡಲಾಗಿದೆ. ಮೈಸೂರಿನಲ್ಲಿ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಬೆಡ್ ಗಳ ಸಂಖ್ಯೆ ಹೆಚ್ಚು ಮಾಡಲಾಗುತ್ತೆ. ಖಾಸಗೀ ಆಸ್ಪತ್ರೆ ಮುಖ್ಯಸ್ಥರಿಗೂ ಸೂಚನೆ ನೀಡಲಾಗಿದೆ. ಒಟ್ಟು 3000 ಹಾಸಿಗೆಗಳು ಕೋವಿಡ್ ಗೆ ಮೀಸಲಿಡಲಾಗಿವುದು. ಈಗ ಒಂದು ವಾರದಲ್ಲಿ 1718 ಹೆಚ್ವುವರಿ ಬೆಡ್ ವ್ಯವಸ್ಥೆ ಮಾಡಲಾಗುತ್ತೆ. ಪ್ರತಿ ದಿನ 3 ಸಾವಿರ ಟೆಸ್ಟ್ ಗಳ ಮಾಡಲು ಸೂಚಿಸಲಾಗಿದೆ. ಮೈಸೂರು ವಿವಿಯಲ್ಲೂ ಐಸಿಎಂ ಆರ್ ನಿಂದ ಪರವಾನಗೆ ಸಿಕ್ಕ ತಕ್ಷಣ ಲ್ಯಾಬ್ ತೆರೆಯಲಾಗುತ್ತೆ. ಕೋವಿಡ್ ಪೇಷೆಂಟ್ ಗೆ ಬೆಡ್ ಹಂಚಿಕೆಯನ್ನ ಏಕಗವಾಕ್ಷೀಯ ಪದ್ದತಿ ಮಾಡಲಾಗುತ್ತೆ. ಇದಕ್ಕೆ ಪ್ರತ್ಯೇಕ ತಂಡ ರಚನೆ ಮಾಡುತ್ತೇವೆ. ಇದಕ್ಕೆ ಜನರ ಸಹಾರವೂ ಅಗತ್ಯ. ಕಾನೂನು ಅನುಷ್ಠಾನ ಮಾಡಿದರೆ ಮಾತ್ರಕ್ಕೆ ಕರೋನಾ ನಿಯಂತ್ರಣ ಸಾಧ್ಯವಿಲ್ಲ. ಜನ ಅರ್ಥ ಮಾಡಿಕೊಳ್ಳಬೇಕು ಎಂದು ಸಚಿವ ಸುಧಾಕರ್ ತಿಳಿಸಿದರು.

key words: health department- change –technical- reasons-Minister Sudhakar